ಕರಾಚಿ: ಪಾಕಿಸ್ತಾನದ ವೇಗದ ಬೌಲರ್ ಉಮರ್ ಗುಲ್ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಶನಿವಾರ ವಿದಾಯ ಘೋಷಿಸಿದ್ದಾರೆ. ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಟಿ–20 ಕಪ್ ಟೂರ್ನಿಯ ಬಳಿಕ ಆಡುವುದಿಲ್ಲ ಎಂದು ಅವರು ಹೇಳಿದ್ದಾರೆ.

36 ವರ್ಷದ ಗುಲ್ ಪಾಕಿಸ್ತಾನದ ಪರ ಕೊನೆಯ ಏಕದಿನ ಪಂದ್ಯ ಆಡಿದ್ದು 2016ರಲ್ಲಿ. ರಾಷ್ಟ್ರೀಯ ಟಿ–20 ಕಪ್ ಟೂರ್ನಿಯಲ್ಲಿ ಅವರು ಬಲೂಚಿಸ್ತಾನ ತಂಡದ ಪರ ಆಡುತ್ತಿದ್ದಾರೆ. ಭಾನುವಾರ ಟೂರ್ನಿಯ ಕೊನೆಯ ದಿನ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 47 ಟೆಸ್ಟ್ ಪಂದ್ಯಗಳಿಂದ 34.06ರ ಸರಾಸರಿಯಲ್ಲಿ 163 ವಿಕೆಟ್ ಗಳಿಸಿದ್ದಾರೆ. 130 ಏಕದಿನ ಪಂದ್ಯಗಳಿಂದ 179 ಹಾಗೂ 60 ಟ್ವೆಂಟಿ–20 ಪಂದ್ಯಗಳಲ್ಲಿ 85 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

‘ಬಹಳಷ್ಟು ವಿಚಾರ ಮಾಡಿದ ಬಳಿಕ ಭಾರವಾದ ಹೃದಯದೊಂದಿಗೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತನಾಗುವ ನಿರ್ಧಾರ ಮಾಡಿದ್ದೇನೆ‘ ಎಂದು ಟ್ವಿಟರ್ ಖಾತೆಯಲ್ಲಿ ಗುಲ್ ಬರೆದುಕೊಂಡಿದ್ದಾರೆ.

‘ದೇಶದ ಪರ ಪೂರ್ಣ ಪ್ರಮಾಣದ ಪರಿಶ್ರಮದೊಂದಿಗೆ ಆಡಿದ್ದೇನೆ. ಕ್ರಿಕೆಟ್ ಯಾವಾಗಲೂ ನನಗೆ ಅಚ್ಚುಮೆಚ್ಚು. ಆದರೆ ಎಲ್ಲದಕ್ಕೂ ಕೊನೆಯೆಂಬುದು ಇರಲೇಬೇಕಲ್ಲ‘ ಎಂದು ಅವರು ಹೇಳಿದ್ದಾರೆ.

ಪೇಶಾವರದಲ್ಲಿ ಜನಿಸಿದ ಗುಲ್, 2003ರಲ್ಲಿ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2013ರಲ್ಲಿ ದಕ್ಷಿಣ ಆಫ್ರಿಕಾ ಎದುರು ಆಡಿದ್ದೇ ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.