ನವದೆಹಲಿ: ಭಾರತ ಕ್ರಿಕೆಟ್ ತಂಡವನ್ನು ಹಿಂದಿಕ್ಕಿರುವ ಪಾಕಿಸ್ತಾನ ಬಹಳ ಮುಂದೆ ಸಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಹೇಳಿದ್ದಾರೆ.

'ಸುನೋ ಟಿವಿ'ಗೆ ರಮೀಜ್ ರಾಜಾ ನೀಡಿರುವ ಸಂದರ್ಶನವನ್ನು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

ವೈಟ್ ಬಾಲ್ ಕ್ರಿಕೆಟ್ನಲ್ಲಿ ನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ಏಷ್ಯಾ ಕಪ್ ಫೈನಲ್ ತಲುಪಿದ್ದೇವೆ. ಆದರೆ ಶತಕೋಟಿ ಡಾಲರ್ ಉದ್ಯಮ ಹೊಂದಿರುವ ಭಾರತ ಹಿಂದುಳಿದಿದೆ ಎಂದು ಟೀಕಿಸಿದರು.

ಭಾರತೀಯ ಕ್ರಿಕೆಟ್ ನೂಚ್ಚು ನೂರಾಯಿತು. ಬಿಸಿಸಿಐ ಮುಖ್ಯ ಆಯ್ಕೆಗಾರ, ಆಯ್ಕೆ ಸಮಿತಿಯನ್ನೇ ವಜಾಗೊಳಿಸಿತು. ಪಾಕಿಸ್ತಾನವು ಹಿಮ್ಮೆಟ್ಟಿಸಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ನಾಯಕನನ್ನೇ ಬದಲಿಸಿತು ಎಂದು ವಾಗ್ದಾಳಿ ನಡೆಸಿದರು.

ತಾವು ಪಿಸಿಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಿತ್ತು ಎಂಬುದನ್ನು ರಮೀಜ್ ಸಮರ್ಥಿಸಿಕೊಂಡರು. ಆದರೂ ತಮ್ಮನ್ನು ವಜಾಗೊಳಿಸಲಾಗಿದೆ. ಇದು ಫುಟ್ಬಾಲ್ ವಿಶ್ವಕಪ್ನಲ್ಲಿ ಫ್ರಾನ್ಸ್ ಫೈನಲ್ಗೆ ಪ್ರವೇಶಿಸಿದ ಹೊರತಾಗಿಯೂ ತನ್ನ ಮಂಡಳಿಯನ್ನೇ ತಲೆದಂಡ ಮಾಡಿದಂತೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.