ಪೋರ್ಟ್ ಮೊರೆಸ್ಬಿ: ಪಾಪುವಾ ನ್ಯೂಗಿನಿ ತಂಡ, ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಮುಂದಿನ ಐಸಿಸಿ ಟಿ–20 ವಿಶ್ವಕಪ್ನಲ್ಲಿ ಆಡಲು ಅರ್ಹತೆ ಪಡೆದಿದೆ. ಪೂರ್ವ ಏಷ್ಯಾ ಪೆಸಿಫಿಕ್ ವಲಯ ಅರ್ಹತಾ ಟೂರ್ನಿಯಲ್ಲಿ ಶುಕ್ರವಾರ ಈ ತಂಡ 100 ರನ್ಗಳಿಂದ ಫಿಲಿಪೀನ್ಸ್ ತಂಡವನ್ನು ಸುಲಭವಾಗಿ ಸೋಲಿಸಿತು.

ಇದು ವಿಶ್ವಕಪ್ಗೆ ಅರ್ಹತೆ ಪಡೆದ 15ನೇ ತಂಡವಾಗಿದೆ. ಮೊದಲು ಬ್ಯಾಟ್ ಮಾಡಿದ ನ್ಯೂಗಿನಿ ತಂಡ 6 ವಿಕೆಟ್ಗೆ 229 ರನ್ಗಳ ಭಾರಿ ಒತ್ತ ಗಳಿಸಿತು. ಟೊನಿ ಉರ, ನಾಯಕ ಅಸದ್ ವಲಾ ಮತ್ತು ಚಾರ್ಲ್ಸ್ ಅಮಿನಿ ಕ್ರಮವಾಗಿ 61, 59 ಮತ್ತು 51 ರನ್ ಗಳಿಸಿದರು. ಫಿಲಿಪೀನ್ಸ್ ತಂಡ ಆಲೌಟ್ ಆಗದಿದ್ದರೂ 20 ಓವರುಗಳಲ್ಲಿ 7 ವಿಕೆಟ್ಗೆ 129 ರನ್ ಗಳಿಸಲಷ್ಟೇ ಶಕ್ತವಾಯಿತು. ಮಧ್ಯಮ ವೇಗಿ ಕಬುವಾ ಮೊರಿಯಾ ಎರಡು ವಿಕೆಟ್ ಪಡೆದರು.

ಪಾಪುವಾ ನ್ಯೂಗಿನಿ ಇದುವರೆಗೆ ಆಡಿದ ಐದೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಜಪಾನ್ ವಿರುದ್ಧ ಶನಿವಾರ ಒಂದು ಪಂದ್ಯ ಬಾಕಿಯಿದ್ದರೂ, ಅದರ ಫಲಿತಾಂಶ ಅರ್ಹತೆಯ ಮೇಲೆ ಪರಿಣಾಮ ಬೀರದು.

ವಿಶ್ವಕಪ್ಗೆ ಇನ್ನೂ ಐದು ತಂಡಗಳಿಗೆ ಅರ್ಹತೆ ಪಡೆಯಲು ಅವಕಾಶವಿದೆ. ಒಟ್ಟು 20 ತಂಡಗಳು ಟಿ–20 ವಿಶ್ವಕಪ್ನಲ್ಲಿ ಆಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.