ಬೆಂಗಳೂರು:ಪಾರ್ಥಿವ್ ಪಟೇಲ್, ಹೈನ್ರಿಚ್ ಕ್ಲಾಸೆನ್ ಮತ್ತು ನವದೀಪ್ ಸೈನಿ ಅಭಿಮಾನಿಗಳ ಪ್ರೀತಿಯ ಎಸೆತಗಳಿಗೆ ಬೌಲ್ಡ್ ಆದರು.

ಹೌದು. ಕಿಕ್ಕಿರಿದು ತುಂಬಿದ್ದ ಓರಾಯನ್ ಮಾಲ್‌ನಲ್ಲಿ ‘ಕಿಂಗ್ ಫಿಷರ್ ಬೌಲ್ ಔಟ್’ ಆರನೇ ಆವೃತ್ತಿಗಾಗಿ ಆರ್‌ಸಿಬಿ ಆಟಗಾರರು ಅಭಿಮಾನಿಗಳ ಬೌಲಿಂಗ್ ಎದುರಿಸಿದರು. ಕೆಲವರಿಗೆ ವಿಕೆಟ್ ಒಪ್ಪಿಸಿದರೆ, ವಿಕೆಟ್ ಪಡೆಯ ಲಾಗವರಿಗೆ ನಗುವಿನೊಂದಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.

ಚಿತ್ರದುರ್ಗದ ಶಿವರಾಜ್, ಕೋಲಾರದ ಸದ್ದಾಂ, ಖುದ್ರತ್, ಸಯ್ಯದ್ ರೋಶನ್, ಮೊಹಮ್ಮದ್ ಅಬ್ರಾರ್ ಮತ್ತು ಹೈದರಾಬಾದ್‌ನ ರಿಚರ್ಡ್ ಅವರು ಆರ್‌ಸಿಬಿ ಆಟಗಾರರ ವಿಕೆಟ್ ಪಡೆದು, ಹಸ್ತಾಕ್ಷರ ಗಿಟ್ಟಿಸಿಕೊಂಡರು. ಆಟಗಾರರು ತಮ್ಮ ಅಭಿಮಾನಿಗಳ ಪ್ರೀತಿಯನ್ನು ಹತ್ತಿರದಿಂದ ಕಣ್ತುಂಬಿಕೊಂಡರೆ, ಕ್ರಿಕೆಟ್ ತಾರೆಯರಿಗೇ ಬೌಲಿಂಗ್ ಮಾಡಿದ ಖುಷಿಯಲ್ಲಿ ಅಭಿಮಾನಿಗಳಿದ್ದರು.

ಪಾರ್ಥಿವ್, ಕ್ಲಾಸೆನ್ ಮತ್ತು ಸೈನಿ ಅವರ ವಿಕೆಟ್ ಉರುಳಿಸಿದ ಸದ್ದಾಂ, ‘ಇಷ್ಟು ದಿನ ಆಟಗಾರರನ್ನು ಟಿವಿಯಲ್ಲಿ ನೋಡುತ್ತಿದ್ದೆವು. ಮೆಚ್ಚಿನ ಬ್ಯಾಟ್ಸ್‌ಮನ್‌ಗಳಿಗೆ ಬೌಲ್ ಮಾಡಿದ್ದು ನನ್ನ ಅದೃಷ್ಟ’ ಎಂದರು.

ಹೆನ್ರಿಚ್ ಕ್ಲಾಸೆನ್ ವಿಕೆಟ್ ಉರುಳಿಸಿದ ಶಿವರಾಜ್ ‘ನಾನು ಗಲ್ಲಿ ಕ್ರಿಕೆಟ್ ಆಡುತ್ತಿದ್ದವ. ಕನಸಿನಲ್ಲೂ ಆರ್‌ಸಿಬಿ ಆಟಗಾರರಿಗೆ ಬೌಲಿಂಗ್ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ವಿಕೆಟ್ ಕಿತ್ತಾಗ ಆದ ಸಂತೋಷ ಅಷ್ಟಿಷ್ಟಲ್ಲ. ಜನರು ನನ್ನನ್ನು ಅಭಿನಂದಿಸಿದ್ದು ಜೀವಮಾನದ ಅದ್ಭುತ ಕ್ಷಣ’ ಎಂದರು.

ರಾಬಾದಿನ ರಿಚರ್ಡ್ ಕಳೆದ 10 ವರ್ಷಗಳಿಂದ ಆರ್‌ಸಿಬಿ ಅಭಿಮಾನಿ, ನವ್‌ದೀಪ್ ಸೈನಿ ವಿಕೆಟ್ ಪಡೆದ ಅವರು, ‘ಈ ಬಾರಿ ಸೋ ತಿರಬಹುದು. ಮುಂದಿನ ಸಾರಿ ಕಪ್ ನಮ್ದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.