ಕಾನ್ಪುರ: ರಸ್ತೆ ಸುರಕ್ಷತಾ ವಿಶ್ವ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತ ಲೆಜೆಂಡ್ಸ್ ತಂಡವು ಶನಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ 61 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಮಾಜಿ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ಪ್ರಮುಖರು ಮತ್ತೆ ಕ್ರಿಕೆಟ್ ಅಖಾಡಕ್ಕಿಳಿದಿರುವುದು ವಿಶೇಷವೆನಿಸಿತ್ತು. ಇದರಿಂದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಇದನ್ನೂ ಓದಿ:ಏಷ್ಯಾ ಕಪ್ ಫೈನಲ್: ಪ್ರಶಸ್ತಿಗೆ ಪಾಕ್– ಲಂಕಾ ಪೈಪೋಟಿ

ಕಾನ್ಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಲೆಜೆಂಡ್ಸ್, ಸ್ಟುವರ್ಟ್ ಬಿನ್ನಿ ಅಜೇಯ ಅರ್ಧಶತಕದ (82*) ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 217 ರನ್ ಪೇರಿಸಿತ್ತು.

ಕೇವಲ 42 ಎಸೆತಗಳನ್ನು ಎದುರಿಸಿದ ಬಿನ್ನಿ ಆರು ಸಿಕ್ಸರ್ ಹಾಗೂ ಐದು ಬೌಂಡರಿ ನೆರವಿನಿಂದ 82 ರನ್ ಗಳಿಸಿ ಔಟಾಗದೆ ಉಳಿದರು.

ಸುರೇಶ್ ರೈನಾ 33 ಹಾಗೂ ಯೂಸುಫ್ ಪಠಾಣ್ ಅಜೇಯ 35 ರನ್ಗಳ ಕೊಡುಗೆ ನೀಡಿದರು. ಈ ಪೈಕಿ 15 ಎಸೆತಗಳನ್ನು ಎದುರಿಸಿದ ಯೂಸುಫ್ ಇನ್ನಿಂಗ್ಸ್ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದ್ದವು.

ತಮ್ಮ ಮೆಚ್ಚಿನ ಸ್ಟ್ರೇಟ್ ಡ್ರೈವ್ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಸಚಿನ್ 16 ರನ್ ಗಳಿಸಿ ನಿರ್ಗಮಿಸಿದರು.

ಬಳಿಕ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಒಂಬತ್ತು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಾಯಕ ಜಾಂಟಿ ರೋಡ್ಸ್ 38 ರನ್ ಗಳಿಸಿ ಔಟಾಗದೆ ಉಳಿದರು.

ಭಾರತದ ಪರ ರಾಹುಲ್ ಶರ್ಮಾ ಮೂರು ಮತ್ತು ಮುನಾಫ್ ಪಟೇಲ್ ಹಾಗೂ ಪ್ರಗ್ಯಾನ್ ಓಜಾ ತಲಾ ಎರಡು ವಿಕೆಟ್ಗಳನ್ನು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.