ಲೀಡ್ಸ್:ಅಫ್ಗಾನಿಸ್ತಾನ ಮತ್ತು ವೆಸ್ಟ್‌ಇಂಡೀಸ್ ನಡುವೆ ಕಳೆದ ಗುರುವಾರ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿಅಫ್ಗಾನ್‌ನ ಇಕ್ರಂ ಅಲಿ ಖಿಲ್ ದಾಖಲೆ ನಿರ್ಮಿಸಿದ್ದಾರೆ.

ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಇಕ್ರಂ 93 ಎಸೆತಗಳಲ್ಲಿ 86ರನ್ ಬಾರಿಸಿದರು. ಇದು ಅವರು ವೈಯಕ್ತಿ ಗರಿಷ್ಠ ಸ್ಕೋರ್. ಇದರ ಮೂಲಕ ಅವರು ಇನ್ನೊಂದು ಮಹತ್ತರ ದಾಖಲೆ ಮುರಿದರು.ಭಾರತದ ಕ್ರಿಕೆಟ್ ದಂತಕತೆ ಸಚಿನ್ ಅವರ ಹೆಸರಲ್ಲಿದ್ದ ಬಹುಕಾಲದ ವಿಶ್ವಕಪ್ ದಾಖಲೆಯನ್ನು ಅವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ವಿಶ್ವಕಪ್‌ನಲ್ಲಿ80+ ರನ್ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ (18 ವರ್ಷ278 ದಿನಗಳು)ಎಂಬ ಖ್ಯಾತಿಗೆ ಇಕ್ರಮ್ ಪಾತ್ರರಾದರು.

ಸಚಿನ್ ಅವರು 1992ರ ವಿಶ್ವಕಪ್‌ನ ನ್ಯೂಜಿಲೆಂಡ್ ಎದುರಿನ ಪೈಪೋಟಿಯಲ್ಲಿ 84 ರನ್ ಗಳಿಸಿದ್ದರು. ಆಗ ಅವರ ವಯಸ್ಸು18 ವರ್ಷ 318 ದಿನಗಳಾಗಿದ್ದವು.

‘ಕ್ರಿಕೆಟ್ ಲೋಕದ ದಿಗ್ಗಜರಲ್ಲಿ ಸಚಿನ್ ಕೂಡ ಒಬ್ಬರು. ಅವರ ದಾಖಲೆ ಮೀರಿ ನಿಂತಿದ್ದು ಸಂತಸ ತಂದಿದೆ. ಈ ಸಾಧನೆಯು ಹೆಮ್ಮೆಯಿಂದ ಬೀಗುವಂತೆ ಮಾಡಿದೆ’ ಎಂದು ಇಕ್ರಂ ಖುಷಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.