ಲಂಡನ್: ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡರು. ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೊದಲ ಇಂಗ್ಲೆಂಡ್‌ಯೇತರ ವ್ಯಕ್ತಿ ಎಂಬ ಶ್ರೇಯಅವರದಾಯಿತು.

ಸಂಗಕ್ಕರ ಒಂದು ವರ್ಷ ಅಧ್ಯಕ್ಷ ಸ್ಥಾನದಲ್ಲಿರುತ್ತಾರೆ. ನಿರ್ಗಮಿತ ಅಧ್ಯಕ್ಷ ಆ್ಯಂಟನಿ ರೆಫೋರ್ಡ್ ಅವರು ಕಳೆದ ಮೇ ತಿಂಗಳಲ್ಲಿ ನಡೆದ ಎಂಸಿಸಿ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಈ ಸ್ಥಾನಕ್ಕೆ ಸಂಗಕ್ಕರ ಅವರನ್ನು ನಾಮಕರಣ ಮಾಡಿದ್ದರು.

‘ಈ ಪ್ರತಿಷ್ಠಿತ ಸ್ಥಾವ ವಹಿಸಿಕೊಳ್ಳಲು ನನಗೆ ರೋಮಾಂಚನ ಆಗುತ್ತಿದೆ. ಕ್ರಿಕೆಟ್‌ನ ಏಳಿಗೆಗಾಗಿ ಎಂಸಿಸಿ ಜೊತೆ ಶ್ರಮಪಡುತ್ತೇನೆ’ ಎಂದು 41 ವರ್ಷ ವಯಸ್ಸಿನ ಸಂಗಕ್ಕರ ಹೇಳಿಕೆಯಲ್ಲಿ ತಿಳಿಸಿದ್ಧಾರೆ. 134 ಟೆಸ್ಟ್‌ಗಳಲ್ಲಿ ಅವರು 12,400 ರನ್ ಹೊಡೆದಿದ್ದಾರೆ. ಎಂಸಿಸಿ ಜೊತೆ ದೀರ್ಘಕಾಲೀನ ಸಂಬಂಧ ಹೊಂದಿರುವ ಅವರು ಕ್ಲಬ್‌ನ ವಿರುದ್ಧ 2002ರಲ್ಲಿ ಪಂದ್ಯ ಆಡಿದ್ದರು.

ಅವರು 2005ರಲ್ಲಿ ತ್ಸುನಾಮಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ನಡೆದ ಪಂದ್ಯದಲ್ಲಿ ಎಂಸಿಸಿ ಪರ, ಅಂತರರಾಷ್ಟ್ರೀಯ ಇಲೆವೆನ್ ವಿರುದ್ಧ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.