ಬೆಂಗಳೂರು: ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯ ಎ ಗುಂಪಿನಲ್ಲಿ ಆಡಲಿರುವ ತಂಡಗಳು ಶನಿವಾರ ನಗರಕ್ಕೆ ಬರಲಿವೆ.

ಇದೇ 10ರಿಂದ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಆದ್ದರಿಂದ ಕ್ರೀಡಾಂಗಣದ ಸಮೀಪವಿರುವ ಎರಡು ಹೋಟೆಲ್ಗಳಲ್ಲಿ ತಂಡಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಬಿಸಿಸಿಐನ ಅಧಿಕಾರಿಗಳೇ ಈ ಎರಡೂ ಹೋಟೆಲ್ಗಳಿಗೆ ಈ ಮುಂಚೆ ಭೇಟಿ ನೀಡಿ ಜೀವ ಸುರಕ್ಷಾ ವಾತಾವರಣದ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಕೆಎಸ್ಸಿಎ ಮೂಲಗಳು ತಿಳಿಸಿವೆ.

ಆಟಗಾರರ ಆರೋಗ್ಯ ಪರೀಕ್ಷೆ ಮತ್ತು ಕೋವಿಡ್ –19 ಪರೀಕ್ಷೆಗಳನ್ನು ಬಿಸಿಸಿಐ ಮಾರ್ಗಸೂಚಿಗೆ ಅನುಗುಣವಾಗಿ ಮಾಡಲಾಗುವುದು. ಆಟಗಾರರ ಪ್ರತ್ಯೇಕವಾಸ ಮತ್ತು ಅಭ್ಯಾಸಕ್ಕೆ ಅವಕಾಶಗಳನ್ನು ನೀಡಲಾಗುವುದು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ನಾಯಕತ್ವದ ಉತ್ತರಪ್ರದೇಶ, ಮನದೀಪ್ ಸಿಂಗ್ ನಾಯಕತ್ವದ ಪಂಜಾಬ್ ತಂಡಗಳು ಈ ಗುಂಪಿನಲ್ಲಿ ಆಡಲಿವೆ. ಕರ್ನಾಟಕ ತಂಡಕ್ಕೆ ಕರುಣ್ ನಾಯರ್ ನಾಯಕರಾಗಿದ್ದಾರೆ.

ಆಲೂರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳು:

ಜನವರಿ 10: ಕರ್ನಾಟಕ–ಜಮ್ಮು–ಕಾಶ್ಮೀರ , ರೈಲ್ವೆಸ್–ತ್ರಿಪುರ, ಪಂಜಾಬ್–ಉತ್ತರಪ್ರದೇಶ

ಜನವರಿ 12; ರೈಲ್ವೆಸ್–ಉತ್ತರಪ್ರದೇಶ; ಜಮ್ಮು ಕಾಶ್ಮೀರ –ತ್ರಿಪುರ; ಕರ್ನಾಟಕ–ಪಂಜಾಬ್

ಜನವರಿ 14; ಕರ್ನಾಟಕ–ತ್ರಿಪುರ, ಜಮ್ಮು ಕಾಶ್ಮೀರ–ಉತ್ತರಪ್ರದೇಶ, ಪಂಜಾಬ್ –ರೈಲ್ವೆಸ್.

ಜನವರಿ 16; ಜಮ್ಮು ಕಾಶ್ಮೀರ –ಪಂಜಾಬ್, ರೈಲ್ವೆಸ್–ಕರ್ನಾಟಕ, ಉತ್ತರಪ್ರದೇಶ–ತ್ರಿಪುರ

ಜನವರಿ 18: ಕರ್ನಾಟಕ–ಉತ್ತರಪ್ರದೇಶ; ಪಂಜಾಬ್–ತ್ರಿಪುರ, ಜಮ್ಮು–ಕಾಶ್ಮೀರ–ರೈಲ್ವೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.