ಗುವಾಹಟಿ: ಪ್ರಸಕ್ತ ಭಾರತ ವಿರುದ್ಧ ಸಾಗುತ್ತಿರುವ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ.

ಭಾರತದ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸುತ್ತಿರುವ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಏಳು ಮಂದಿ ಆಟಗಾರರ ಪೈಕಿ ಆರು ಮಂದಿ ಆಟಗಾರರು ಮೂರನೇ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ.

ಈ ಪೈಕಿ ಮೂರನೇ ಪಂದ್ಯಕ್ಕೆ ಸ್ಟೀವ್ ಸ್ಮಿತ್ ಹಾಗೂ ಆ್ಯಡಂ ಜಂಪಾ ಅಲಭ್ಯರಾಗಿದ್ದು, ಈಗಾಗಲೇ ತವರಿನತ್ತ ಪಯಣ ಬೆಳೆಸಿದ್ದಾರೆ.

ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಸದಸ್ಯರ ಪೈಕಿ ಫೈನಲ್ ಪಂದ್ಯದ ಹೀರೊ ಟ್ರಾವಿಸ್ ಹೆಡ್ ಮಾತ್ರ ತಂಡದೊಂದಿಗೆ ಉಳಿದುಕೊಳ್ಳಲಿದ್ದಾರೆ.
.ಟಿ20 ಕ್ರಿಕೆಟ್: ಆಸ್ಟ್ರೇಲಿಯಾ ಎದುರು ‘ಹ್ಯಾಟ್ರಿಕ್ ಜಯ’ದ ಮೇಲೆ ಭಾರತ ಕಣ್ಣು.
ಇನ್ನುಳಿದಂತೆ ಗುವಾಹಟಿಯಲ್ಲಿ ಇಂದು ನಡೆಯಲಿರುವ ಮೂರನೇ ಪಂದ್ಯದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್ ಮತ್ತು ಸೀನ್ ಅಬಾಟ್ ತವರಿಗೆ ಮರಳಲಿದ್ದಾರೆ.

ಬದಲಿ ಆಟಗಾರರಾಗಿ ವಿಕೆಟ್ ಕೀಪರ್ ಜೋಶ್ ಪಿಲಿಪ್ ಹಾಗೂ ಬೆನ್ ಮೆಕ್‌ಡೆರ್ಮಟ್ ತಂಡವನ್ನು ಸೇರಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಆಯ್ಕೆಗೆ ಲಭ್ಯರಾಗಲಿದ್ದಾರೆ. ಮೂರನೇ ಪಂದ್ಯದ ಬಳಿಕ ಬೆನ್ ಡ್ವಾರ್ಶುಯಿಸ್ ಮತ್ತು ಸ್ಪಿನ್ನರ್ ಕ್ರಿಸ್ ಗ್ರೀನ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಕೊನೆಯ ಎರಡು ಪಂದ್ಯಗಳು ರಾಯಿಪುರ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.