ಬೆಂಗಳೂರು: ಭಾರತ ತಂಡದಲ್ಲಿ ವಿಶ್ವದರ್ಜೆಯ ಆಟಗಾರರು ಇದ್ದಾರೆ. ಅವರನ್ನು ಮಣಿಸಲು ಉತ್ಕೃಷ್ಟ ಗುಣಮಟ್ಟದ ಆಟವಾಡುವುದು ತಮ್ಮ ಮುಂದಿರುವ ಸವಾಲು ಎಂದು ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಲಾರಾ ವೊಲ್ವಾರ್ಟ್ ಹೇಳಿದರು.

ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಮಂಡಳಿ ಅಧ್ಯಕ್ಷರ ಇಲೆವನ್ ತಂಡಗಳ ನಡುವಣ ಅಭ್ಯಾಸ ಪಂದ್ಯ ನಡೆಯಲಿದೆ. ಪೂರ್ವಭಾವಿಯಾಗಿ ಬುಧವಾರ ದಕ್ಷಿಣ ಆಫ್ರಿಕಾ ಆಟಗಾರ್ತಿಯರು ತಾಲೀಮು ನಡೆಸಿದರು. ಇಲ್ಲಿ ಇದೇ 16, 19 ಹಾಗೂ 23ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಏಕದಿನ ಪಂದ್ಯಗಳು ನಡೆಯಲಿವೆ.

‘ಏಕದಿನ ಕ್ರಿಕೆಟ್ನಲ್ಲಿ ಆಡಿದ ನಂತರ ಟಿ20 ಸರಣಿ ಆಡಲಿದ್ದೇವೆ. ಮುಂಬರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಇದು ನೆರವಾಗಲಿದೆ. ಏಕೈಕ ಟೆಸ್ಟ್ ಆಡಲಿರುವುದು ನಿಜಕ್ಕೂ ವಿಶೇಷ’ ಎಂದು ಸುದ್ದಿಗಾರರಿಗೆ ಹೇಳಿದರು.

‘ನಮ್ಮ ತಂಡದಲ್ಲಿ ಕೆಲವರು ಈಚೆಗ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಿದ್ದೆವು. ಇದರಿಂದಾಗಿ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯವಾಗಲಿದೆ’ ಎಂದು ಲಾರಾ ಹೇಳಿದರು.

ಪಂದ್ಯ ಆರಂಭ: ಮಧ್ಯಾಹ್ನ 1.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.