ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನ ಸಿದ್ಧತೆಗಳ ಭಾಗವಾಗಿ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಲಕ್ಷ್ಯ ಸೇನ್ ಮತ್ತು ಪಿ.ವಿ. ಸಿಂಧು ಅವರು ಕ್ರಮವಾಗಿ ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ವಿಶೇಷ ತರಬೇತಿ ಪಡೆಯಲಿದ್ದಾರೆ. ಇದಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದೆ.

ಫ್ರಾನ್ಸ್ನಲ್ಲಿ 12 ದಿನಗಳ ತರಬೇತಿಗಾಗಿ ವಿಶ್ವ ಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತ ಸೇನ್ ಹಣಕಾಸಿನ ನೆರವು ಕೋರಿದ್ದರು. ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ಗೆ ಕೋಟಾ ಪಡೆದಿರುವ ಅವರು, ಜುಲೈ 8ರಿಂದ 21 ರವರೆಗೆ ತಮ್ಮ ಕೋಚ್ ಮತ್ತು ನೆರವು ಸಿಬ್ಬಂದಿ ತರಬೇತಿಗೆ ತೆರಳುವರು.

ಜರ್ಮನಿಯ ಹರ್ಮನ್ ನ್ಯೂಬರ್ಗರ್ ಸ್ಪೋರ್ಟ್ಸ್ಸ್ಕೂಲ್ನಲ್ಲಿ ತರಬೇತಿ ಪಡೆಯುವ ಸಂಬಂಧ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಪ್ರಸ್ತಾವ ಸಲ್ಲಿಸಿದ್ದರು. ಪ್ಯಾರಿಸ್ಗೆ ತೆರಳುವ ಮುನ್ನ ಅವರು ತಮ್ಮ ಕೋಚ್ ಮತ್ತು ನೆರವು ಸಿಬ್ಬಂದಿಯೊಂದಿಗೆ ಒಂದು ತಿಂಗಳು ಅಲ್ಲಿ ತರಬೇತಿ ಪಡೆಯುವರು. ಅವರು ಮಹಿಳಾ ಸಿಂಗಲ್ಸ್ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಕಾಯ್ದಿರಿಸಿದ್ದಾರೆ.

ಕ್ರೀಡಾ ಸಚಿವಾಲಯದ ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಮ್ ಅಡಿಯಲ್ಲಿ ಅವರ ಈ ವಿದೇಶಿ ತರಬೇತಿಯ ವೆಚ್ಚವನ್ನು ಭರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.