ದುಬೈ: ಆಸ್ಟ್ರೇಲಿಯಾದಲ್ಲಿ ಇದೇ ವರ್ಷದ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಟಿಕೆಟ್ಗಳ ಮಾರಾಟ ಆರಂಭವಾಗಿದೆ.

ಟೂರ್ನಿಯ ಎಲ್ಲ 45 ಪಂದ್ಯಗಳ ಟಿಕೆಟ್ಗಳುt20worldcup.comನಲ್ಲಿ ಸೋಮವಾರದಿಂದ ಲಭ್ಯ ಇವೆ.

‘ಮಕ್ಕಳಿಗಾಗಿ ಟಿಕೆಟ್ಗಳು ಮೊದಲ ಸುತ್ತಿನ ಮತ್ತು ಸೂಪರ್ 12 ಪಂದ್ಯಗಳಿಗೆ ₹ 375ರಿಂದ ಆರಂಭವಾಗುತ್ತವೆ. ವಯಸ್ಕರ ಟಿಕೆಟ್ಗಳು ಆಯ್ದ ಪಂದ್ಯಗಳಿಗೆ ₹ 1500ರಿಂದ ಲಭ್ಯವಿವೆ‘ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಳಿಸಿದೆ.

ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ಅನ್ನುಆಸ್ಟ್ರೇಲಿಯಾ ಮೊದಲ ಬಾರಿಗೆ ಆಯೋಜಿಸುತ್ತಿದೆ. ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೋಬರ್ಟ್, ಮೆಲ್ಬರ್ನ್, ಪರ್ತ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿವೆ.

‘ತವರಿನ ಅಭಿಮಾನಿಗಳ ಎದುರು ವಿಶ್ವಕಪ್ಅನ್ನು ಆಯೋಜಿಸುತ್ತಿರುವುದು ದೊಡ್ಡ ಗೌರವ. ಪ್ರಶಸ್ತಿ ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದೇವೆ‘ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.