ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಭಾರತ ತಂಡ ಉಮೇಶ್ ಯಾದವ್ ಅವರಿಲ್ಲದೇ ಕಣಕ್ಕಿಳಿಯಬೇಕಿದೆ.

ಮೀನಖಂಡದ ನೋವಿನಿಂದ ಬಳಲುತ್ತಿರುವ ಉಮೇಶ್ ಯಾದವ್ ಭಾರತಕ್ಕೆ ಮರಳಲಿದ್ದಾರೆ. ಬೆಂಗಳೂರಿನ ಎನ್ಸಿಎಯ ಪುನಶ್ಚೇತನ ಘಟಕದಲ್ಲಿ ಆರೈಕೆ ಪಡೆಯಲಿದ್ದಾರೆ. ಅವರ ಸ್ಥಾನದಲ್ಲಿ ಶಾರ್ದೂಲ್ ಠಾಕೂರ್ ಅಥವಾ ತಂಗರಸು ನಟರಾಜನ್ ಅವರಿಗೆ ಸ್ಥಾನ ಸಿಗಬಹುದು. ನವದೀಪ್ ಸೈನಿ ಕೂಡ ನಿರೀಕ್ಷೆಯಲ್ಲಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನವೇ ಇಶಾಂತ್ ಶರ್ಮಾ ಗಾಯಗೊಂಡಿದ್ದರು. ಅಡಿಲೇಡ್ ಟೆಸ್ಟ್ನಲ್ಲಿ ಮೊಹಮ್ಮದ್ ಶಮಿ ಗಾಯಗೊಂಡು ಮರಳಿದ್ದರು.

ಮೆಲ್ಬರ್ನ್ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ್ದ ಮೊಹಮ್ಮದ್ ಸಿರಾಜ್ ಒಟ್ಟು ಐದು ವಿಕೆಟ್ಗಳನ್ನು ಗಳಿಸಿ ಮಿಂಚಿದ್ದರು.

ಆದರೆ, ಮೂರನೇ ಪಂದ್ಯ ಗೆದ್ದವರಿಗೆ ಸರಣಿ ಜಯದ ಅವಕಾಶವಿ ರುವುದರಿಂದ ಮಹತ್ವ ಪಡೆದಿದೆ. ಆದ್ದರಿಂದ ಅನುಭವಿ ಬೌಲರ್ಗಳಿಗೆ ಮಣೆ ಹಾಕುವ ಸಾಧ್ಯತೆಯೇ ಹೆಚ್ಚಾಗಿದೆ. ಜಸ್ಪ್ರೀತ್ ಬೂಮ್ರಾ ಮತ್ತು ಸಿರಾಜ್ ಅವರೊಂದಿಗೆ ಶಾರ್ದೂಲ್ ಕಣಕ್ಕಿಳಿಯಬಹುದು. ಸ್ಪಿನ್ ವಿಭಾಗದಲ್ಲಿ ಅಶ್ವಿನ್ ಮತ್ತು ರವೀಂದ್ರ ಜಡೇಜ ಉತ್ತಮ ಲಯದಲ್ಲಿರುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.