ರಾಜ್‌ಕೋಟ್: ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ತಂಡವು ಬುಧವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಹರಿಯಾಣ ತಂಡವನ್ನು ಎದುರಿಸಲಿದೆ.

ಭಾರತ ತಂಡದಲ್ಲಿ ಆಡಿರುವ ವಿಕೆಟ್‌ಕೀಪರ್ ದಿನೇಶ್ ತಂಡವು ಇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು. ಅಲ್ಲಿ ಬಲಿಷ್ಠ ಮುಂಬೈ ಎದುರು ಜಯಭೇರಿ ಬಾರಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ. ಸಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ್ದ ಹರಿಯಾಣ ಎಂಟರ ಘಟ್ಟದಲ್ಲಿ ಬಂಗಾಳ ವಿರುದ್ಧ ಅಮೋಘ ಜಯ ಸಾಧಿಸಿತ್ತು.

ತಮಿಳುನಾಡು ತಂಡದ ಬ್ಯಾಟಿಂಗ್ ವಿಭಾಗ ಬಲಾಢ್ಯವಾಗಿದೆ. ಬಾಬಾ ಅಪರಾಜಿತ್, ಬಾಬಾ ಇಂದ್ರಜೀತ್, ಆಲ್‌ರೌಂಡರ್ ವಿಜಯ್ ಶಂಕರ್, ಸಾಯಿಕಿಶೋರ್ ಮತ್ತು ಸ್ಫೋಟಕ ಶೈಲಿಯ ಬ್ಯಾಟರ್ ಶಾರೂಕ್ ಖಾನ್ ಅವರನ್ನು ಕಟ್ಟಿಹಾಕುವುದು ಹರಿಯಾಣ ಬೌಲರ್‌ಗಳಿಗೆ ಸವಾಲಾಗಲಿದೆ. ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿರುವ ಹರಿಯಾಣ ಬೌಲಿಂಗ್ ವಿಭಾಗವೂ ಉತ್ತಮವಾಗಿದೆ.

ಕ್ವಾರ್ಟರ್‌ಫೈನಲ್‌ನಲ್ಲಿ ಶತಕ ಬಾರಿಸಿರುವ ಹರಿಯಾಣದ ಅಂಕಿತ್ ಕುಮಾರ್, ಆಲ್‌ರೌಂಡರ್ ರಾಹುಲ್ ತೆವಾಟಿಯಾ, ಸುಮಿತ್ ಕುಮಾರ್ ಅವರು ತಮಿಳುನಾಡು ಬೌಲರ್‌ಗಳಾದ ಟಿ. ನಟರಾಜ್ ಮತ್ತು ವರುಣ್ ಚಕ್ರವರ್ತಿ ಅವರಿಗೆ ಸವಾಲೊಡ್ಡಬಲ್ಲರು.

ಆರಂಭ: ಮಧ್ಯಾಹ್ನ 1.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.