ಮುಂಬೈ: ಏಕದಿನ ಕ್ರಿಕೆಟ್ನಲ್ಲಿ 50ನೇ ಶತಕ ಬಾರಿಸಿದ ಬಳಿಕ ವಿರಾಟ್ ಕೊಹ್ಲಿಯವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ತಲೆಬಾಗಿ ನಮಿಸಿದರು. ಅವರ ಈ ನಡೆ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದುಕೊಂಡಿತು.
.Virat Kohli | 50ನೇ ಶತಕ ಬಾರಿಸಿದ ವಿರಾಟ್: ಸಚಿನ್ ತೆಂಡೂಲ್ಕರ್ ದಾಖಲೆ ಪತನ.
ಈವರೆಗೂ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ (49) ಬಾರಿಸಿದ ದಾಖಲೆ ಸಚಿನ್ ಅವರ ಹೆಸರಿನಲ್ಲಿ ಇತ್ತು. ನ್ಯೂಜಿಲೆಂಡ್ ವಿರುದ್ಧದ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಆ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದರು. ಶತಕ ಗಳಿಸಿದ ಬಳಿಕ ಗಾಳಿಯಲ್ಲಿ ಮುಷ್ಠಿ ಗುದ್ದಿ, ಬ್ಯಾಟ್ ಹಾಗೂ ಹೆಲ್ಮೆಟ್ ಎತ್ತಿ ಸಂಭ್ರಮಿಸಿದರು. ಬಳಿಕ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಸಚಿನ್ ತೆಂಡೂಲ್ಕರ್ ಅವರಿಗೆ ತಲೆ ಬಾಗಿಸಿ ನಮಿಸಿದರು.
.CWC 2023 | ವಿರಾಟ್ 'ಶತಕಗಳ ಅರ್ಧಶತಕ' - ಮುರಿಯಿತು ಕ್ರಿಕೆಟ್ ದೇವರ ದಾಖಲೆ.
ಇನಿಂಗ್ಸ್ ವಿರಾಮದ ವೇಳೆ ಈ ಶತಕ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್, ‘ ಅನುಷ್ಕಾ ಹಾಗೂ ನನ್ನ ಹೀರೋ ಸಚಿನ್ ಅವರು ಕೂಡ ಇದ್ದರು. ಆ ಕ್ಷಣವನ್ನು ವಿವರಿಸಲು ಅಸಾಧ್ಯ. ನನ್ನ ಜೀವನ ಸಂಗಾತಿ ಹಾಗೂ ಹೀರೋ ಮುಂದೆ, ಐತಿಹಾಸಿಕ ವಾಂಖೆಡೆ ಮೈದಾನದಲ್ಲಿ 50ನೇ ಶತಕ ಗಳಿಸಿದ್ದು ಅದ್ಭುತವಾಗಿತ್ತು’ ಎಂದು ಹೇಳಿದ್ದಾರೆ.
.ಭಾರತೀಯ ನನ್ನ ದಾಖಲೆ ಮುರಿದಿದ್ದಕ್ಕೆ ಸಂತಸವಿದೆ: ವಿರಾಟ್ ಗುಣಗಾನ ಮಾಡಿದ ಸಚಿನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.