ನವದೆಹಲಿ: ಭಾರತ ವಿರುದ್ಧದ ಮುಂಬರುವ ಏಕದಿನ ಸರಣಿಗಾಗಿ ಪ್ರವಾಸಿ ವೆಸ್ಟ್‌ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಸರಿ ಸುಮಾರು ಎರಡುವರೆ ವರ್ಷಗಳ ಬಳಿಕ ಕೆಮರ್ ರೋಚ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧ ಭಾರತ ತಂಡವು ತವರು ನೆಲದಲ್ಲಿ ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸಲಿವೆ. ಟ್ವೆಂಟಿ-20 ತಂಡವನ್ನು ವಿಂಡೀಸ್ ಶುಕ್ರವಾರ ಘೋಷಿಸಲಿದೆ.

ಇದನ್ನೂ ಓದಿ:ವಿಂಡೀಸ್ ಎದುರಿನ ಸರಣಿಗೆ ತಂಡ: ರವಿ ಬಿಷ್ಣೋಯಿಗೆ ಸ್ಥಾನ; ಮರಳಿದ ಕುಲದೀಪ್

ಬಾರ್ಬಡೋಸ್‌ನ33 ವರ್ಷದ ಆಟಗಾರ ಕೆಮರ್ ರೋಚ್, ಕೊನೆಯದಾಗಿ 2019ರಲ್ಲಿ ಭಾರತ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಆಡಿದ್ದರು.

15 ಮಂದಿ ಸದಸ್ಯರ ತಂಡವನ್ನು ಕೀರನ್ ಪೊಲಾರ್ಡ್ ಮುನ್ನಡೆಸಲಿದ್ದಾರೆ. ಬ್ರಂಡನ್ ಕಿಂಗ್ ಸಹ ತಂಡಕ್ಕೆ ಮರಳಿದ್ದಾರೆ.

ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ವೇಳಾಪಟ್ಟಿ ಪರಿಷ್ಕೃತಗೊಳಿಸಲಾಗಿದ್ದು, ಏಕದಿನ ಸರಣಿಯ ಎಲ್ಲ ಮೂರು ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದೆ. ಬಳಿಕ ಮೂರು ಪಂದ್ಯಗಳ ಟಿ20 ಸರಣಿಯು ಕೋಲ್ಕತ್ತದಲ್ಲಿ ಆಯೋಜನೆಯಾಗಲಿದೆ.

ವೆಸ್ಟ್‌ಇಂಡೀಸ್ ತಂಡ ಇಂತಿದೆ:
ಕೀರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಕ್ರೂಮಾ ಬೊನೆರ್, ಡ್ಯಾರೆನ್ ಬ್ರಾವೊ, ಶಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೇನ್, ಅಲ್ಜರಿ ಜೋಸೆಫ್, ಬ್ರಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮಾರಿಯೊ ಶೆಫರ್ಡ್, ಒಡಿನ್ ಸ್ಮಿತ್ ಮತ್ತು ಹೇಡನ್ ವಾಲ್ಶ್ ಜೂ.

ವೇಳಾಪಟ್ಟಿ ಇಂತಿದೆ:

ಫೆ. 06, ಭಾನುವಾರ: ಮೊದಲ ಏಕದಿನ, ಅಹಮದಾಬಾದ್
ಫೆ. 09, ಬುಧವಾರ: ದ್ವಿತೀಯ ಏಕದಿನ, ಅಹಮದಾಬಾದ್
ಫೆ. 11, ಶುಕ್ರವಾರ: ಅಂತಿಮ ಏಕದಿನ, ಅಹಮದಾಬಾದ್

ಫೆ. 16, ಬುಧವಾರ:ಮೊದಲ ಟ್ವೆಂಟಿ-20, ಕೋಲ್ಕತ್ತ
ಫೆ. 18, ಶುಕ್ರವಾರ:ದ್ವಿತೀಯ ಟ್ವೆಂಟಿ-20, ಕೋಲ್ಕತ್ತ
ಫೆ. 20, ಭಾನುವಾರ:ಅಂತಿಮ ಟ್ವೆಂಟಿ-20, ಕೋಲ್ಕತ್ತ

ಏಕದಿನ ಹಾಗೂ ಟ್ವೆಂಟಿ-20 ಸರಣಿಗಾಗಿ ಟೀಮ್ ಇಂಡಿಯಾವನ್ನು ಈಗಾಗಲೇ ಘೋಷಿಸಲಾಗಿದೆ. ಗಾಯಮುಕ್ತ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.