ಸಿಡ್ನಿ: ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಗಾಯಾಳುಗಳಾಗಿರುವುದು ದೊಡ್ಡ ಸಮಸ್ಯೆಯಾಗಿರುವ ಮಧ್ಯೆಯೇ, ಆಸ್ಟ್ರೇಲಿಯಾ ಆಟಗಾರರು ಕೂಡ ಗಾಯದ ತೊಂದರೆಗೆ ಸಿಲುಕಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ವಿಲ್ ಪುಕೊವಸ್ಕಿ ಗುರುವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಹೀಗಾಗಿ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ಅವರು ಲಭ್ಯವಿರುವುದಿಲ್ಲ. ವಿಲ್ ಪುಕೊವಸ್ಕಿ ಸ್ಥಾನಕ್ಕೆ ಮಾರ್ಕಸ್ ಹ್ಯಾರಿಸ್ ಬರಲಿದ್ದಾರೆ.

ಮುಗಿಯದ ಗಾಯಾಳುಗಳ ಸಮಸ್ಯೆ

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯಲ್ಲಿ, ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯಾ 1-1 ಸಮಬಲ ಸಾಧಿಸಿವೆ. ಶುಕ್ರವಾರದಿಂದ ಆರಂಭವಾಗಲಿರುವ ಈ ಸರಣಿಯ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಕೂಡ ಗೆಲುವು ಸಾಧಿಸುವ ಉತ್ಕಟ ಇಚ್ಛೆ ಹೊಂದಿವೆ. ಆದರೆ ಗಾಯಾಳುಗಳ ಸಮಸ್ಯೆ ಉಭಯ ತಂಡಕ್ಕೆ ಹಿನ್ನಡೆ ತಂದಿದೆ. ಅದರಲ್ಲೂ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಗಾಯದ ಸಮಸ್ಯೆಗೆ ಸಿಲುಕಿದ್ದಾರೆ.

ವಿಲ್ ಪುಕೊವಸ್ಕಿ ಮೊದಲ ಇನ್ನಿಂಗ್ಸ್ನಲ್ಲಿ 62 ರನ್ ಗಳಿಸಿ ಗಮನ ಸೆಳೆದಿದ್ದರು. ಆದರೆ ನಂತರದಲ್ಲಿ ಭುಜದ ನೋವಿಗೆ ಸಿಲುಕಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ ವಿಲ್ ಆಡುವುದಿಲ್ಲ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ತಿಳಿಸಿದ್ದಾರೆ. ಆರಂಭಿಕ ಮತ್ತು ಭರವಸೆಯ ಬ್ಯಾಟ್ಸ್ಮನ್ ವಿಲ್ ಪುಕೊವಸ್ಕಿ ಅನುಪಸ್ಥಿತಿ ಆಸ್ಟ್ರೇಲಿಯಾ ತಂಡವನ್ನು ಕಾಡಲಿದೆ.

ಇದನ್ನೂ ಓದಿ:ಎರಡೇ ಪದಗಳಲ್ಲಿ ಬಿಜೆಪಿ ಸಂಸದನ ಬಾಯಿಗೆ ಬೀಗ ಜಡಿದ ಹನುಮ ವಿಹಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.