ನವದೆಹಲಿ: ವಿಶ್ವದರ್ಜೆ ಬೌಲರ್‌ಗಳ ಮಧ್ಯೆ ಬ್ಯಾಟಿಂಗ್ ಸ್ವರೂಪವನ್ನೇ ವೀರೇಂದ್ರ ಸೆಹ್ವಾಗ್ ಬದಲಾಯಿಸಿದ್ದರು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಶ್ಲಾಘಿಸಿದ್ದಾರೆ.

'ಐಸಿಸಿ ಹಾಲ್ ಆಫ್ ಫೇಮ್' ಗೌರವಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಭಾಜನರಾಗಿದ್ದಾರೆ.

ಐಸಿಸಿ ಹಾಲ್ ಆಫ್ ಫೇಮ್‌ಗೆ ಸೆಹ್ವಾಗ್ ಸೇರ್ಪಡೆಗೊಳ್ಳುವ ಮೂಲಕ ಸರಿಯಾದ ಕ್ರಿಕೆಟಿಗನನ್ನೇ ಆಯ್ಕೆ ಮಾಡಲಾಗಿದೆ ಎಂದು ಗಂಗೂಲಿ ಅಭಿನಂದಿಸಿದ್ದಾರೆ.
.ಐಸಿಸಿ ‘ಹಾಲ್ ಆಫ್ ಫೇಮ್’ಗೆ ಸೆಹ್ವಾಗ್, ಎಡುಲ್ಜಿ.ICC World Cup 2023 IND vs NZ: ಸೆಮಿಯಲ್ಲಿಯೂ ಭಾರತಕ್ಕೆ ವಿಜಯ ದೀಪ ಬೆಳಗುವ ಛಲ.
ವಿಶ್ವದರ್ಜೆಯ ಬೌಲರ್‌ಗಳು ಅತ್ಯಂತ ಪ್ರಬಲರಾಗಿದ್ದ ಸಂದರ್ಭದಲ್ಲಿ ಸೆಹ್ವಾಗ್, ಆಕ್ರಮಣಕಾರಿ ಶೈಲಿ ಬ್ಯಾಟಿಂಗ್ ಮೂಲಕ ಟೆಸ್ಟ್ ಕ್ರಿಕೆಟ್‌ನ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಿದ್ದರು. ಅವರು ಅತ್ಯಂತ ವಿಶೇಷ ಆಟಗಾರ ಎಂದು ಅವರು ಹೇಳಿದ್ದಾರೆ.

ಆಗ ವಿಭಿನ್ನ ಕಾಲಘಟ್ಟವಾಗಿತ್ತು. 2000ರ ದಶಕದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್ ವಿಶ್ವದರ್ಜೆಯ ಆಟಗಾರರರಿಂದ ತುಂಬಿಕೊಂಡಿತ್ತು. ಆದರೆ ವೀರು ಅಗ್ರ ಕ್ರಮಾಂಕದಲ್ಲಿ ಬಂದು ಟೆಸ್ಟ್ ಕ್ರಿಕೆಟ್‌ನ ಸ್ವರೂಪವನ್ನೇ ಬದಲಾಯಿಸಿದ್ದರು ಎಂದು ಶ್ಲಾಘಿಸಿದ್ದಾರೆ.

ವೀರೇಂದ್ರ ಸೆಹ್ವಾಗ್, ತಮ್ಮ ಆಕ್ರಮಣಕಾರಿ ಶೈಲಿ ಬ್ಯಾಟಿಂಗ್‌ನಿಂದಲೇ ಭಾರತಕ್ಕೆ ಸ್ಮರಣೀಯ ಗೆಲುವುಗಳನ್ನು ಒದಗಿಸಿಕೊಟ್ಟಿದ್ದರು. ಎಂತಹುದೇ ಪಿಚ್ ಪರಿಸ್ಥಿತಿ ಇದ್ದರೂ ವೀರೂ ಬ್ಯಾಟಿಂಗ್ ಶೈಲಿ ಬದಲಾಯಿಸುತ್ತಿರಲಿಲ್ಲ. ಇದನ್ನೇ ಗಂಗೂಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.