ಬ್ರಸಿಲ್ಲ: ಮನೆ ನಿರ್ಮಾಣ ವೇಳೆ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಖ್ಯಾತ ಫುಟ್ಬಾಲ್ ತಾರೆ ನೇಮರ್ ಅವರಿಗೆ $3.33 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ ಎಂದು ಬ್ರೆಜಿಲ್ನ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಬ್ರೆಜಿಲ್ನ ಕರಾವಳಿ ಪ್ರದೇಶದಲ್ಲಿ ಮನೆ ನಿರ್ಮಾಣ ವೇಳೆ ಅವರು ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರು.

ಶುದ್ಧ ನೀರಿನ ಮೂಲಗಳ ಬಳಕೆ ಹಾಗೂ ಹರಿವು, ಬಂಡೆ ಮತ್ತು ಮರಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದರು. ಸೋಮವಾರ ಅದು ಖಚಿತವಾಗಿದೆ. ಹೀಗಾಗಿ ನೈಮರ್ ಅವರಿಗೆ ದಂಡ ವಿಧಿಸಲಾಗಿದೆ.

ನೇಮರ್ ಅವರ ಐಷಾರಾಮಿ ನಿವಾಸವು ರಿಯೊ ಡಿ ಜನೈರೊ ರಾಜ್ಯದ ಮಂಗರಟಿಬ ಪಟ್ಟಣದಲ್ಲಿ ಇದೆ.

ಅವರ ನಿವಾಸದಲ್ಲಿ ಕೃತಕ ಕೊಳ ನಿರ್ಮಾಣ ವೇಳೆ ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂದು ಮಂಗರಟಿಬದ ಪರಿಸರ ಅಧಿಕಾರಿಗಳು ಹೇಳಿದ್ದಾರೆ.

ದಂಡದ ಜತೆಗೆ ಪ್ರಕರಣದವನ್ನು ಸ್ಥಳೀಯ ಅಟಾರ್ನಿ ಜನರಲ್ ಅವರ ಕಚೇರಿಯಲ್ಲಿ, ಪೊಲೀಸರು, ಪರಿಸರ ರಕ್ಷಣಾ ಅಧಿಕಾರಿಗಳು ಹಾಗೂ ಇನ್ನಿತರ ಪರಿಸರ ಸಂರಕ್ಷಣಾ ಸಂಸ್ಥೆಗಳು ವಿಚಾರಣೆ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.