ಸಿಡ್ನಿ: ಫ್ರಾನ್ಸ್ ಫುಟ್‌ಬಾಲ್ ತಂಡದ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ಅವರನ್ನು ಸೆಳೆದುಕೊಳ್ಳಲು ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್, ದಾಖಲೆಯ ₹ 2,716 ಕೋಟಿ ಮೊತ್ತ ನೀಡಲು ಮುಂದಾಗಿದೆ.

ಎಂಬಾಪೆ ಅವರು ಈಗ ಫ್ರಾನ್ಸ್‌ನ ಪಿಎಸ್‌ಜಿ (ಪ್ಯಾರಿಸ್ ಸೇಂಟ್ ಜರ್ಮೈನ್) ಕ್ಲಬ್ ಪರ ಆಡುತ್ತಿದ್ದು, ಮುಂದಿನ ಋತುವಿನ ಬಳಿಕ ಒಪ್ಪಂದದ ಅವಧಿ ಕೊನೆಗೊಳ್ಳಲಿದೆ. ಪಿಎಸ್‌ಜಿ ಜತೆಗಿನ ಒಪ್ಪಂದವನ್ನು ಒಂದು ವರ್ಷಕ್ಕೆ ವಿಸ್ತರಿಸುವ ಅವಕಾಶ ಇದೆಯಾದರೂ, ಎಂಬಾಪೆ ಆಸಕ್ತಿ ತೋರಿಲ್ಲ. ಮುಂದಿನ ಋತುವಿನ ಬಳಿಕ ಕ್ಲಬ್ ತೊರೆಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಇದರ ನಡುವೆಯೇ ಅಲ್ ಹಿಲಾಲ್, ದೊಡ್ಡ ಮೊತ್ತ ನೀಡಿ ಅವರನ್ನು ಸೆಳೆಯಲು ಪ್ರಯತ್ನಿಸಿದೆ. ಸೌದಿ ಅರೇಬಿಯಾದ ಕ್ಲಬ್, ಎಂಬಾಪೆ ಅವರನ್ನು ಸಂಪರ್ಕಿಸಲು ಮುಂದಾಗಿರುವುದನ್ನು ಪಿಎಸ್‌ಜಿ ಕ್ಲಬ್ ಖಚಿತಪಡಿಸಿದೆ. ಮಾತ್ರವಲ್ಲ, ಒಪ್ಪಂದಕ್ಕೆ ಸಂಬಂಧಿಸಿದಂತೆ ಎಂಬಾಪೆ ಅವರೊಂದಿಗೆ ನೇರವಾಗಿ ಮಾತನಾಡಲು ಅಲ್ ಹಿಲಾಲ್ ಕ್ಲಬ್‌ಗೆ ಅನುಮತಿ ನೀಡಿದೆ.

ಅಲ್ ಹಿಲಾಲ್ ಕ್ಲಬ್ ಈಚೆಗೆ ಅರ್ಜೆಂಟೀನಾದ ಸ್ಟ್ರೈಕರ್ ಲಯೊನೆಲ್ ಮೆಸ್ಸಿ ಅವರಿಗೆ ಭಾರಿ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಮೆಸ್ಸಿ ಅವರು ಸೌದಿ ಲೀಗ್‌ನಲ್ಲಿ ಆಡುವ ಬದಲು ಅಮೆರಿಕದ ಮೇಜರ್ ಲೀಗ್ ಸಾಕರ್‌ನಲ್ಲಿ (ಎಂಎಲ್‌ಎಸ್) ಇಂಟರ್ ಮಯಾಮಿ ಕ್ಲಬ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.