ರಿಯಾದ್: ಕಳೆದ ವಾರದ ಕೊನೆಯಲ್ಲಿ ನಡೆದ ಲೀಗ್ ಪಂದ್ಯದ ವೇಳೆ ಅಂಕಣದಲ್ಲಿ ‘ಪ್ರಚೋದನಗೆ ಕಾರಣವಾಗುವ ಸನ್ನೆ ಪ್ರದರ್ಶಿಸಿದ್ದಕ್ಕೆ’ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಸೌದಿ ಅರೇಬಿಯಾ ಫುಟ್ಬಾಲ್ ಫೆಡರೇಷನ್ ಒಂದು ಪಂದ್ಯಕ್ಕೆ ಅಮಾನತು ಮಾಡಿದೆ. ಇದರ ಜೊತೆಗೆ ₹6.63 ಲಕ್ಷ ದಂಡ ವಿಧಿಸಿದೆ.

ಅಲ್ ನಾಸರ್ ತಂಡದ ನಾಯಕರೂ ಆಗಿರುವ ರೊನಾಲ್ಡೊ ತೋರಿದ ಸನ್ನೆಯು ನಿಯಮದ ಉಲ್ಲಂಘನೆಯಾಗಿದ್ದು, ಪಂದ್ಯದ ವೇಳೆ ಪ್ರೇಕ್ಷಕರ ಪ್ರಚೋದನೆಗೆ ಕಾರಣವಾಗುತ್ತದೆ ಎಂದು ಫೆಡರೇಷನ್ ತಿಳಿಸಿದೆ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವಂತಿಲ್ಲ.

ಅಲ್ ನಾಸರ್ ವಿರುದ್ಧ ಆ ಪಂದ್ಯದಲ್ಲಿ ಅಲ್ ಶಾಬಾಬ್ ತಂಡ 3–2 ಗೋಲುಗಳಿಂದ ಜಯಗಳಿಸಿತ್ತು. ಪ್ರೇಕ್ಷಕರು ಪಂದ್ಯದ ವೇಳೆ ಅವರ ದೀರ್ಘಕಾಲದ ಎದುರಾಳಿ ಲಯೊನೆಲ್ ಮೆಸ್ಸಿ ಹೆಸರನ್ನು ಕೂಗುತ್ತಿದ್ದುದಕ್ಕೆ ಪ್ರತಿಯಾಗಿ ಅವರು ಪದೇ ಪದೇ ತೊಡೆ ತಟ್ಟಿದ್ದು ವಿಡಿಯೊ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಈ ವಿಡಿಯೊ ವ್ಯಾಪಕವಾಗಿ ಹರಿದಾಡಿತು. ಸೌದಿಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ನಲ್ಲಿ ಮುಂಚೂಣಿಯಲ್ಲಿತ್ತು.

‘ತಾವು ಎಲ್ಲ ಫುಟ್ಬಾಲ್ ಕ್ಲಬ್ಗಳನ್ನು ಗೌರವಿಸುವುದಾಗಿ ಮತ್ತು ತಾವು ತೋರಿದ ಸನ್ನೆಯು ಶಕ್ತಿ ಮತ್ತು ವಿಜಯದ ಸೂಚಕವಾಗಿದ್ದು ಅದು ತಪ್ಪಲ್ಲ. ಯುರೋಪಿನಲ್ಲಿ ಇದನ್ನು ತಪ್ಪೆಂದು ಪರಿಗಣಿಸುವುದಿಲ್ಲ’ ಎಂದು ರೊನಾಲ್ಡೊ ಹೇಳಿಕೆಯನ್ನು ಕ್ರೀಡಾ ಪತ್ರಿಕೆ ಅಲ್ ರಿಯಾದಿಯಾ ಪ್ರಕಟಿಸಿದೆ.

ಕಳೆದ ವರ್ಷದ ಜನವರಿಯಲ್ಲಿ ಅಲ್ ಸಾಸೆರ್ ಕ್ಲಬ್ ಜೊತೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸೌದಿ ಅರೇಬಿಯಾದಲ್ಲಿ ಆಡುವುದಕ್ಕೆ ಹೋದ ಮೊದಲ ಫುಟ್ಬಾಲ್ ತಾರೆ ಎನಿಸಿದ್ದರು 39 ವರ್ಷದ ರೊನಾಲ್ಡೊ.

ವಿಶ್ವದ ಖ್ಯಾತನಾಮ ಆಟಗಾರರನ್ನು ಪ್ರೊ ಲೀಗ್ ತಂಡಗಳಿಗೆ ಸೆಳೆಯಲು ಸೌದಿ ಅಪಾರ ಹಣವನ್ನು ವ್ಯಯಿಸುತ್ತಿದೆ. 2034ರ ವಿಶ್ವಕಪ್ ಆತಿಥ್ಯ ವಹಿಸುವ ನಿಟ್ಟಿನಲ್ಲೂ ಪ್ರಯತ್ನ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.