ಸೋನಿಪತ್: ಪ್ರಮುಖ ಆರ್ಚರಿ ಪಟು ದೀಪಿಕಾ ಕುಮಾರಿ ಅವರು ಈ ವರ್ಷಾಂತ್ಯದಲ್ಲಿ ನಡೆ ಯಲಿರುವ ಏಷ್ಯನ್ ಗೇಮ್ಸ್, ವಿಶ್ವಕಪ್ ಮತ್ತು ವಿಶ್ವ ಚಾಂಪಿಯನ್ಷಿಪ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಮಾತೃತ್ವ ವಿರಾಮ ತೆಗೆದು ಕೊಂಡಿದ್ದ ದೀಪಿಕಾ ಅವರು ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದರು. ಆದರೆ ಇಲ್ಲಿ ಸೋಮವಾರ ಕೊನೆಗೊಂಡ ಮಹಿಳಾ ರಿಕರ್ವ್ ವಿಭಾಗದ ಅಂತಿಮ ಹಂತದ ಆಯ್ಕೆ ಟ್ರಯಲ್ಸ್ನಲ್ಲಿ ಅಗ್ರ 8ರೊಳಗಿನ ಸ್ಥಾನ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಕೋಮಲಿಕಾ ಬಾರಿ ಕೂಡ ಸ್ಥಾನ ಪಡೆಯಲು ವಿಫಲರಾದರು. ಭಜನ್ ಕೌರ್, ಅದಿತಿ ಜೈಸ್ವಾಲ್, ಅಂಕಿತಾ ಭಕತ್ ಮತ್ತು ಸಿಮ್ರನ್ಜೀತ್ ಕೌರ್ ಅವರು ಮೂರೂ ಪ್ರಮುಖ ಟೂರ್ನಿಗಳಿಗೆ ಸ್ಥಾನ ಗಿಟ್ಟಿಸಿದ್ದಾರೆ. ದೀಪಿಕಾ ಅವರ ಪತಿ ಅತನು ದಾಸ್ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.