ನವದೆಹಲಿ: ಭಾರತದ ಪರ್ವೀನ್ ಹೂಡಾ ಅವರು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಮೀನಾಕ್ಷಿ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮಹಿಳೆಯರ 63 ಕೆಜಿ ವಿಭಾಗದ ಫೈನಲ್ ಬೌಟ್‌ನಲ್ಲಿ ಪರ್ವೀನ್ 5–0ಯಿಂದ ಜಪಾನ್‌ನ ಕಿಟೊ ಮಯಿ ಅವರನ್ನು ಪರಾಭವಗೊಳಿಸಿದರು.

ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ಪರ್ವೀನ್ ಅವರು ಈ ಹಣಾಹಣಿಯಲ್ಲಿ ಎದುರಾಳಿಯ ವಿರುದ್ಧ ಸಂಪೂರ್ಣ ಪಾರಮ್ಯ ಮೆರೆದರು. ‘ಅಪ್ಪರ್ ಕಟ್‘ಗಳ ಮೂಲಕ ನಾಲ್ಕನೇ ಶ್ರೇಯಾಂಕದ ಕಿಟೊ ಅವರನ್ನು ಅಗ್ರಶ್ರೇಯಾಂಕದ ಬಾಕ್ಸರ್ ಕಂಗೆಡಿಸಿದರು.

ಏಷ್ಯನ್ ಚಾಂಪಿಯನ್‌ನಲ್ಲಿ ಇದೇ ಮೊದಲ ಬಾರಿ ಸ್ಪರ್ಧಿಸಿದ್ದ ಮೀನಾಕ್ಷಿ ಅವರು ಟೂರ್ನಿಯನ್ನು ಸ್ಮರಣೀಯವಾಗಿರಿಸಿಕೊಂಡರು. ಫ್ಲೈವೇಟ್ ವಿಭಾಗದಲ್ಲಿ (52 ಕೆಜಿ) ಕಣಕ್ಕಿಳಿದಿದ್ದ ಅವರು ಫೈನಲ್‌ನಲ್ಲಿ 1–4ರಿಂದ ಜಪಾನ್‌ನ ಕಿನೊಶಿಟಾ ರಿಂಕಾ ಎದುರು ಪರಾಭವಗೊಂಡರು. ಈ ಫಲಿತಾಂಶದಲ್ಲಿ ನಿರ್ಣಾಯಕರ ತೀರ್ಪಿನಲ್ಲಿ ಒಮ್ಮತವಿರಲಿಲ್ಲ.

ಈ ಬೌಟ್‌ನ ಆರಂಭದಿಂದಲೇ ನಿಧಾನಗತಿಯ ಆಟಕ್ಕೆ ಮೊರೆಹೋಗಿದ್ದು, ಭಾರತದ ಸ್ಪರ್ಧಿಗೆ ಮುಳುವಾಯಿತು. ಜಪಾನ್ ಬಾಕ್ಸರ್ ಅವರ ನಿಖರ ಪಂಚ್‌ಗಳು ಮೀನಾಕ್ಷಿ ಅವರ ಸೋಲಿಗೆ ಕಾರಣವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.