ನವದೆಹಲಿ: ಹಾಂಗ್‌ಝೌ ಏಷ್ಯನ್ ಗೇಮ್ಸ್ ಷಾಟ್‌ಪಟ್ ಕಂಚಿನ ಪದಕ ವಿಜೇತೆ ಕಿರಣ್ ಬಲಿಯಾನ್ ಅವರನ್ನು ನಿಷೇಧಿತ ಪಟ್ಟಿಯಲ್ಲಿರುವ ಮದ್ದು ಸೇವನೆಗಾಗಿ ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕವು (ನಾಡಾ) ತಾತ್ಕಾಲಿಕವಾಗಿ ಅಮಾನತು ಮಾಡಿದೆ.

ವಿವಿಧ ಕ್ರೀಡೆಗಳಲ್ಲಿರುವ ಕೆಲವು ಅಥ್ಲೀಟುಗಳು ಮದ್ದುಸೇವನೆ ಮಾಡಿದವರ ಪಟ್ಟಿಯಲ್ಲಿದ್ದಾರೆ. ಆದರೆ ಅಚ್ಚರಿಯೆಂಬಂತೆ ಕುಸ್ತಿಪಟು ಬಜರಂಗ್ ಪೂನಿಯಾ ಅವರ ಹೆಸರು ಈ ಬಾರಿ ಕಾಣಿಸಿಕೊಂಡಿಲ್ಲ. ಈ ಹಿಂದೆ ‘ನಾಡಾ’ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಪೂನಿಯಾ ಹೆಸರಿತ್ತು. ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಈಗಾಗಲೇ ಅವರನ್ನು ಅಮಾನತು ಮಾಡಿದೆ.

ಮಹಿಳೆಯರ ಷಾಟ್‌ಪಟ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಅಥ್ಲೀಟ್ ಎಂಬ ಹೆಗ್ಗಳಿಕೆಗೆ 25 ವರ್ಷ ವಯಸ್ಸಿನ ಕಿರಣ್ ಪಾತ್ರರಾಗಿದ್ದರು. ಅವರು ಮೆಟಂಡಿನೊನ್ ಎಂಬ ಅನಾಬಾಲಿಕ್ ಸ್ಟಿರಾಯಿಡ್ ಸೇವನೆ ಮಾಡಿದ್ದು ಪತ್ತೆಯಾಗಿದೆ.

2014ರ ಇಂಚಿಯೊನ್ ಗೇಮ್ಸ್‌ನ ಹ್ಯಾಮರ್ ಥ್ರೊನಲ್ಲಿ ಕಂಚಿನ ಪದಕ ಗೆದ್ದಿದ್ದ ಮಂಜು ಬಾಲಾ ಅವರೂ ನಿಷೇಧಿತ ಮದ್ದುಸೇವನೆಗೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ವರ್ಷದ ಫೆಡರೇಷನ್ ಕಪ್‌ನಲ್ಲಿ ಬೆಳ್ಳಿ ಗೆದ್ದ ಶಾಲಿನಿ ಚೌಧರಿ ಅವರ ಹೆಸರೂ ಪಟ್ಟಿಯಲ್ಲಿದೆ.

ಬ್ಯಾಡ್ಮಿಂಟನ್ ಡಬಲ್ಸ್ ಆಟಗಾರ ಕೃಷ್ಣಪ್ರಸಾದ್ ಗರಗ ಅವರೂ ಮದ್ದುಸೇವನೆ ಮಾಡಿದ್ದು ಖಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.