ಅಸ್ತಾನಾ (ಕಜಕಸ್ತಾನ): ಭಾರತದ ಬಾಕ್ಸರ್‌ಗಳಾದ ಬ್ರಿಜೇಶ್ ತಮ್ಟಾ, ಸಾಗರ್ ಜಾಖಡ್ ಮತ್ತು ಸುಮಿತ್ ಅವರು ಏಷ್ಯನ್ 22 ವರ್ಷದೊಳಗಿನವರ ಮತ್ತು ಯುವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದರು. ಆ ಮೂಲಕ ಪದಕಗಳನ್ನೂ ಖಚಿತಪಡಿಸಿಕೊಂಡರು.

ಬ್ರಿಜೇಶ್ (48 ಕೆ.ಜಿ. ಕ್ಲಾಸ್) ಅವರು ಉಜ್ಬೇಕಿಸ್ತಾನದ ಸಬಿರೊವ್ ಸೈಫಿದ್ದೀನ್ ಅವರನ್ನು ತೀವ್ರ ಹೋರಾಟದ ನಂತರ ಸೋಲಿಸಿದರು. ಇಬ್ಬರೂ ಮೊದಲ ಎರಡು ಸುತ್ತುಗಳಲ್ಲಿ ಒಂದೊಂದರಲ್ಲಿ ಜಯಿಸಿದ್ದರು. ಮೂರನೇ ಸುತ್ತಿನಲ್ಲಿ ಬ್ರಿಜೇಶ್ 4–3 ರಲ್ಲಿ ಜಯಗಳಿಸಿದರು.

ಸಾಗರ್ ಜಾಖಡ್ (60 ಕೆ.ಜಿ) ಮತ್ತು ಸುಮಿತ್ (67 ಕೆ.ಜಿ) ಅವರು ಕ್ರಮವಾಗಿ ಥಾಯ್ಲೆಂಡ್‌ನ ಕಲಾಸೀರಮ್ ತನಫಾನ್‌ಸಕೋನ್ ಮತ್ತು ಕೊರಿಯಾದ ಹಾಂಗ್ ಸಿಯೊ ಜಿನ್ ಅವರನ್ನು 5–0 ಸಮಾನ ಅಂತರದಿಂದ ಸೋಲಿಸಿದರು. ಆದರೆ ಜಿತೇಶ್ (54 ಕೆ.ಜಿ) ಅವರು 0–5 ರಿಂದ ಕಜಕಸ್ತಾನದ ತುಲೆಬೆಕ್ ನುರಾಸಿಲ್ ಅವರಿಗೆ ಮಣಿಸಿದರು.

ಇದರೊಂದಿಗೆ ಈ ಕೂಟದಲ್ಲಿ ಭಾರತಕ್ಕೆ ಎಂಟು ಪದಕಗಳು ಖಚಿತವಾದವು. ಐದು ಮಂದಿ ಮಹಿಳಾ ಬಾಕ್ಸರ್‌ಗಳು– ಅನ್ನು (48 ಕೆ.ಜಿ), ಪಾರ್ಥವಿ ಗ್ರೆವಾಲ್ (66 ಕೆ.ಜಿ), ನಿಕಿತಾ ಚಾಂದ್ (60 ಕೆ.ಜಿ), ಖುಷಿ ಪೂನಿಯಾ (81 ಕೆ.ಜಿ) ಮತ್ತು ನಿರ್ಜರಾ ಬಾನಾ (+81 ಕೆ.ಜಿ) ಅವರು ಸೆಮಿಫೈನಲ್ ಸೆಣಸಾಟ ಆರಂಭಿಸಲಿದ್ದಾರೆ.

ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ (54 ಕೆ.ಜಿ) ಅವರು ಮಂಗಳವಾರ 22 ವರ್ಷದೊಳಗಿನವರ ಮಹಿಳಾ ವಿಭಾಗದಲ್ಲಿ ಉಜ್ಬೇಕಿಸ್ತಾನದ ಉಕ್ತಮೊವಾ ನಿಗಿನಾ ಅವರನ್ನು ಎದುರಿಸಲಿದ್ದಾರೆ.

ಈ ಪ್ರತಿಷ್ಠಿತ ಟೂರ್ನಿಗೆ ಭಾರತ ಬಾಕ್ಸಿಂಗ್ ಫೆಡರೇಷನ್ 50 ಸದಸ್ಯರ ತಂಡವನ್ನು ಕಣಕ್ಕಿಳಿಸಿದೆ. ಇಲ್ಲಿ 25 ತೂಕ ವಿಭಾಗಗಳಲ್ಲಿ 24 ರಾಷ್ಟ್ರಗಳ 390 ಬಾಕ್ಸರ್‌ಗಳು ಸ್ಪರ್ಧಿಸುತ್ತಿದ್ದಾರೆ.

ಯುವ ಮತ್ತು 22 ವರ್ಷದೊಳಗಿನವರ ವಿಭಾಗದ ಫೈನಲ್ ಸೆಣಸಾಟಗಳು ಮೇ 6 ಮತ್ತು 7ರಂದು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.