ಬೆಂಗಳೂರು: ಸತ್ಯಜಿತ್ ಮತ್ತು ಅರ್ಪಣ್ ಅವರ ಆಟದ ಬಲದಿಂದ ಬೀಗಲ್ಸ್ ಬಿ.ಸಿ ತಂಡವು, ಎಸ್ಎಸಿ ಕಪ್ಗಾಗಿ ರಾಜ್ಯ ಆಹ್ವಾನಿತ ಬ್ಯಾಸ್ಕೆಟ್ಬಾಲ್ ಟೂರ್ನಿಯ ಪುರುಷರ ಪಂದ್ಯದಲ್ಲಿ 82–72 ರಿಂದ ವಿವೇಕ್ಸ್ ತಂಡವನ್ನು ಮಣಿಸಿತು.

ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮಧ್ಯಂತರದ ವೇಳೆ 48–43ರಿಂದ ಮುನ್ನಡೆ ಪಡೆದಿದ್ದ ಬೀಗಲ್ಸ್, ಉತ್ತರಾರ್ಧದಲ್ಲೂ ಪಾರಮ್ಯ ಮೆರೆಯಿತು. ಬೀಗಲ್ಸ್ನ ಸತ್ಯಜಿತ್ ಮತ್ತು ಅರ್ಪಣ್ ತಲಾ 22 ಅಂಕ ಗಳಿಸಿದರೆ, ವಿವೇಕ್ಸ್ನ ಸಂಜಯ್ ಮತ್ತು ಮರ್ಕೇಶ್ ಕ್ರಮವಾಗಿ 23 ಮತ್ತು 19 ಅಂಕ ಕಲೆಹಾಕಿದರು.

ದಿನದ ಮತ್ತೊಂದು ಪಂದ್ಯದಲ್ಲಿ ವಿಮಾನಪುರ ತಂಡವು 75–48ರಿಂದ ಎಂಸಿಎಚ್ಎಸ್ ತಂಡವನ್ನು ಸೋಲಿಸಿತು.

ಮಹಿಳೆಯರ ಪಂದ್ಯಗಳ ಫಲಿತಾಂಶ: ಸದರ್ನ್ ಬ್ಲ್ಯೂಸ್ 39–33ರಿಂದ ಭಾರತ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ; ರಾಜ್ಮಹಲ್ 41–16ರಿಂದ ವಿವೇಕ್ಸ್ ವಿರುದ್ಧ; ಬೆಂಗಳೂರು ವ್ಯಾನ್ಗಾರ್ಡ್ಸ್ 62–52ರಿಂದ ಜೆಎಸ್ಸಿ ವಿರುದ್ಧ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.