ನಾನು ಕಂಬಳ ನೋಡುತ್ತಿರುವುದು ಇದೇ ಮೊದಲ ಬಾರಿ. ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ನೋಡಿದ್ದೆ. ಕೆಲದಿನಗಳ ಹಿಂದಷ್ಟೇ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದೇನೆ. ಈಗ ಕಂಬಳ ನೋಡಿ ರೋಮಾಂಚಿತನಾಗಿದ್ದೇನೆ.
–ರಶೀದ್ ಅಹ್ಮದ್, ಚಕ್ಕಮಕ್ಕಿ (ಮೂಡಿಗೆರೆ)
ನಮ್ಮ ಊರಿನ ಸಂಸ್ಕೃತಿ ಇಲ್ಲಿ ಅನಾವರಣಗೊಂಡಿದೆ. ಇಷ್ಟು ಹತ್ತಿರದಿಂದ ಕಂಬಳ ನೋಡುತ್ತಿರುವುದು ಇದೇ ಮೊದಲ ಬಾರಿ. ಕಂಬಳದಲ್ಲಿ ಈ ಪ್ರಮಾಣದ ಜನ ನೋಡಿದ್ದಿಲ್ಲ. ಇಲ್ಲಿನ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಇಷ್ಟವಾಯಿತು.
–ಅಪರ್ಣಾ ಶೈಲೇಶ್, ಉಜಿರೆ
ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಕಂಬಳವನ್ನು ಸರಿಯಾಗಿ ನೋಡಲಾಗಲಿಲ್ಲ ಎನ್ನುವ ನಿರಾಸೆಯಿದೆ. ಕರಾವಳಿ ಭಾಗದ ನನ್ನ ಸ್ನೇಹಿತರು ಕಂಬಳ, ಯಕ್ಷಗಾನದ ಬಗ್ಗೆ ಹೇಳುತ್ತಿದ್ದರು. ಈಗ ಖುದ್ದು ನೋಡಿ ಸಂಸತಗೊಂಡಿದ್ದೇನೆ. ಕೋರಿ ರೊಟ್ಟಿ, ನೀರುದೋಸೆ ಸವಿದೆ.
–ಚೈತ್ರಾ ಬೆಂಗಳೂರು, ಐಟಿ ಉದ್ಯೋಗಿ
ನಮ್ಮ ಊರಿನ ಎಲ್ಲಾ ವಿಧದ ಅಹಾರ ಸವಿದಿದ್ದು ಖುಷಿಯಾಗಿದೆ. ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸ್ನೇಹಿತರ ಪುನರ್‌ಮಿಲನವೂ ಆಯಿತು.