ಬೆಂಗಳೂರು: ವರ್ತೂರಿನ ರಾಕ್ಸ್ ಜಿಮ್ ಮತ್ತು ಇಂಡಿಯನ್ ಫಿಟ್ನೆಸ್ ಮತ್ತು ದೇಹದಾರ್ಢ್ಯ ಫೆಡರೇಷನ್ ಆಶ್ರಯದಲ್ಲಿ ಇದೇ 9ರಂದು ಇಂಡಿಯಾ ಕ್ಲಾಸಿಕ್ –2020 ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.

‘ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. 22 ರಾಜ್ಯಗಳಿಂದ 180 ಸ್ಪರ್ಧಿಗಳು ಭಾಗವಹಿಸುವರು. ಒಟ್ಟು ನಾಲ್ಕು ಲಕ್ಷ ರೂಪಾಯಿ ನಗದು ಬಹುಮಾನಗಳನ್ನು ನೀಡಲಾಗುತ್ತಿದೆ’ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಬಿ. ನಾಯ್ಡು ತಿಳಿಸಿದರು.

‘ಎತ್ತರ ವಿಭಾಗದ ದೇಹದಾರ್ಢ್ಯ ಪಟುಗಳ ಸಂಸ್ಥೆ ನಮ್ಮದು. ಈಗ ನಡೆಯಲಿರುವ ಸ್ಪರ್ಧೆಯಲ್ಲಿ ಗೆದ್ದ ಅಗ್ರ ಆರು ಸ್ಪರ್ಧಿಗಳು ಭಾರತ ತಂಡಕ್ಕೆ ಆಯ್ಕೆಯಾಗುವರು. ಈ ಸಲ ತೂಕದ ವಿಭಾಗಗಳಲ್ಲೂ ಸ್ಪರ್ಧಿಗಳಿದ್ದಾರೆ. ಮೇ ತಿಂಗಳಲ್ಲಿ ಜರ್ಮನಿಯಲ್ಲಿ ನಡೆಯಲಿರುವ ಮಿಸ್ಟರ್ ವರ್ಲ್ಡ್ –2020 ಸ್ಪರ್ಧೆಗಳಿಗೆ ಭಾರತ ತಂಡವು ತೆರಳಲಿದೆ’ ಎಂದರು.

‘ಕೋವಿಡ್ –19 ವೈರಸ್ ಭೀತಿಯು ಇದೆ. ಆದರೆ, ಬೇರೆ ಬೇರೆ ರಾಜ್ಯಗಳಿಂದ ಬರುತ್ತಿರುವ ಸ್ಪರ್ಧಿಗಳು ವಿಮಾನ ನಿಲ್ದಾಣಗಳಲ್ಲಿಯೇ ತಪಾಸಣೆಗೆ ಒಳಪಡುತ್ತಾರೆ’ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೃಷ್ಣ ರಾವ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.