ಹಾಂಗ್‌ಝೌ: ಟೋಕಿಯೊ ಒಲಿಂಪಿಕ್ಸ್ ಪದಕವಿಜೇತೆ ಲವ್ಲಿನಾ ಬೋರ್ಗೊಹೈನ್ ಅವರು ಮಹಿಳೆಯರ 75 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಬುಧವಾರ ನಿರೀಕ್ಷಿತ ಮಟ್ಟದ ಹೋರಾಟ ಪ್ರದರ್ಶಿಸಲಾಗದೇ ಬೆಳ್ಳಿಯ ಪದಕಕ್ಕೆ ಸಮಾಧಾನಪಡಬೇಕಾಯಿತು. 57 ಕೆ.ಜಿ. ವಿಭಾಗದಲ್ಲಿ ಪರ್ವೀನ್ ಹೂಡಾ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕ ಪಡೆದರು.

ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ನಲ್ಲಿ ಭಾರತ ಐದು ಪದಕಗಳೊಂದಿಗೆ ಅಭಿಯಾನ ಮುಗಿಸಿತು. ಇದರಲ್ಲಿ ಒಂದು ರಜತ, ನಾಲ್ಕು ಕಂಚಿನ ಪದಕಗಳು ಒಳಗೊಂಡಿವೆ. ನಾಲ್ಕು ವರ್ಷಗಳ ಹಿಂದೆ, ಜಕಾರ್ತಾದಲ್ಲಿ ಭಾರತ ಒಂದು ಚಿನ್ನ, ಒಂದು ಕಂಚಿನ ಪದಕ ಅಷ್ಟೇ ಗಳಿಸಿತ್ತು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಹಾಗೂ ತವರಿನ ನೆಚ್ಚಿನ ಸ್ಪರ್ಧಿ ಲಿನ್ ಯು ಟಿಂಗ್ ಎದುರು ವಿಶ್ವ ಚಾಂಪಿಯನ್ ಲವ್ಲಿನಾ ಅವರ ರಕ್ಷಣಾತ್ಮಕ ತಂತ್ರ ಹೆಚ್ಚೇನೂ ಫಲಕೊಡಲಿಲ್ಲ. ಫೈನಲ್ ಹೆಚ್ಚುಕಮ್ಮಿ ಮಟ್ಟಕ್ಕಿಳಿಯಿತು. ಏಷ್ಯನ್ ಚಾಂಪಿಯನ್ ಕೂಡ ಆಗಿರುವ ಭಾರತದ ಸ್ಪರ್ಧಿ ಆಕ್ರಮಣದ ಮನೋಭಾವ ಪ್ರದರ್ಶಿಸಲಿಲ್ಲ.

‘ನಾನು ಸಾಕಷ್ಟು ಪ್ರಯತ್ನ ಹಾಕಿದೆ, ಆದರೆ ಚಿನ್ನ ಗೆಲ್ಲಲಾಗಲಿಲ್ಲ. ಒಲಿಂಪಿಕ್ಸ್‌ನಲ್ಲಾದರೂ ಪದಕದ ಬಣ್ಣ ಬದಲಾಯಿಸಲು ಯತ್ನಿಸುವೆ’ ಎಂದು ಬೋರ್ಗೊಹೈನ್ ಹೇಳಿದರು.

ಪರ್ವಿನ್ ಹೂಡಾ 57 ಕೆ.ಜಿ. ವಿಭಾಗದಲ್ಲಿ ಚೀನಾ ತೈಪಿಯ ಲಿನ್ ಯು ಟಿಂಗ್ ಎದುರು ಸೋತು ಕಂಚಿನ ಪದಕ ಪಡೆದರು. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 63 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಲವ್ಲಿನಾ ಕಂಚಿನ ಪದಕ ಗೆದ್ದುಕೊಂಡಿದ್ದರು. ಲಿನ್ ಯು ಟಿಂಗ್ ಅವರು ತಮ್ಮ ಎದುರಾಳಿಗಿಂತ ಎರಡು ಇಂಚು ಹೆಚ್ಚು ಎತ್ತರ ಇದ್ದು ಆ ಅನುಕೂಲವನ್ನು ಚೆನ್ನಾಗಿಯೇ ಬಳಸಿಕೊಂಡರು.

23 ವರ್ಷದ ಪರ್ವಿನ್, ಈಗಾಗಲೇ ಒಲಿಂಪಿಕ್ಸ್ ಕೋಟಾ ಬುಕ್ ಮಾಡಿದ್ದಾರೆ. ನಿಖತ್ ಝರೀನ್ (50 ಕೆಜಿ), ಪ್ರೀತಿ ಪವಾರ್ (54 ಕೆ.ಜಿ) ಮತ್ತು ಬೋರ್ಗೊಹೈನ್ ಕೂಡ ಪ್ಯಾರಿಸ್‌ಗೆ ಟಿಕೆಟ್ ಪಡೆದಿದ್ದಾರೆ. ಪುರುಷರ ವಿಭಾಗದಲ್ಲಿ ನರೆಂದರ್ ಬೆರ್ವಾಲ್ (+92 ಕೆ.ಜಿ) ಮಾತ್ರ ಪದಕ ಗೆದ್ದಿದ್ದಾರೆ. ಆದರೆ ಯಾರೂ ಒಲಿಂಪಿಕ್ಸ್ ಅರ್ಹತೆ ಪಡೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.