ಬೆಂಗಳೂರು: ಬೆಂಗಳೂರು ಚಳಿಗಾಲದ ರೇಸ್ಗಳು ಶುಕ್ರವಾರ (ನವೆಂಬರ್ 1) ಆರಂಭವಾಗಲಿವೆ.

ಈ ಋತುವಿನಲ್ಲಿ 24 ರೇಸ್ ದಿನಗಳನ್ನು ಏರ್ಪಡಿಸಿದ್ದು, ಮುಂದಿನ ವರ್ಷ ಮಾರ್ಚ್ 22ರಂದು ಮುಕ್ತಾಯಗೊಳ್ಳಲಿದೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟೀವರ್ಡ್ (ದಿನದ ಸಭಾಧ್ಯಕ್ಷ) ಕೆ.ಎ.ಜಗದೀಶ್ ತಿಳಿಸಿದರು.

‘ಈ ಅವಧಿಯ ಒಟ್ಟು ಬಹುಮಾನದ ಮೊತ್ತವು ಸುಮಾರು ರೂ.15.47 ಕೋಟಿ ಇರಲಿದೆ. ಸ್ಥಳೀಯ ಕುದುರೆಗಳಿಗೆ ಅವುಗಳ ಪ್ರದರ್ಶನ ಸಾಮರ್ಥ್ಯದ ಮೇರೆಗೆ ಶೇ.15ರಷ್ಟು ಪ್ರೋತ್ಸಾಹ ಧನ ನೀಡಲಾಗುತ್ತಿದೆ‘ ಎಂದು ತಿಳಿಸಿದರು.

‘ ಈ ಚಳಿಗಾಲದಲ್ಲಿ ಪ್ರಮುಖ ರೇಸ್ಗಳಾದ ಬೆಂಗಳೂರು 1000 ಗಿನ್ನಿಸ್ (ನ.30), ಬೆಂಗಳೂರು 2000 ಗಿನ್ನೀಸ್ (ನ. 14) ಮತ್ತು ಬೆಂಗಳೂರು ಓಕ್ಸ್ (ನ. 4) ಏರ್ಪಡಿಸಲಾಗಿದೆ. ಪ್ರತಿಷ್ಠಿತವಾದ ಬೆಂಗಳೂರು ಡರ್ಬಿ ರೇಸ್ ಜನವರಿ 26ರಂದು ನಡೆಸಲಾಗುವುದು. ಸ್ಟೇಯರ್ಸ್ ಮತ್ತು ಸ್ಪ್ರಿಂಟರ್ಸ್ ಟ್ರಯಲ್ ಸ್ಟೇಕ್ಸ್ ರೇಸ್ಗಳನ್ನು ಫೆಬ್ರುವರಿ 7ರಂದು ಆಯೋಜಿಸಲಾಗಿದೆ’ ಎಂದು ಹೇಳಿದರು.

‘ಈ ಅವಧಿಯಲ್ಲಿ ಅಲೊಯನ್ಸ್ ಹಾಗೂ ʼಎʼ ಮತ್ತು ʼಬಿʼ ವರ್ಗ ಸೇರಿದಂತೆ ಸುಮಾರು 109 ಜಾಕಿಗಳಿಗೆ ಬೆಂಗಳೂರು ರೇಸ್ಗಳಲ್ಲಿ ಸವಾರಿ ಮಾಡಲು ಪರವಾನಗಿ ನೀಡಲಾಗಿದೆ. ಇವರೊಂದಿಗೆ ಪರವಾನಗಿ ಪಡೆದಿರುವ ʼಎʼ ವರ್ಗದ 24 ಟ್ರೈನರ್ಗಳು ಸಹ ಈ ಅವಧಿಯಲ್ಲಿ ಪಾಲ್ಗೊಳ್ಳಲಿದ್ದಾರೆ‘ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.