ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈಜು ಚಾಂಪಿಯನ್‌ಷಿಪ್‌: ರಾಷ್ಟ್ರೋತ್ಥಾನ ವಿದ್ಯಾಕೇಂದ್ರಕ್ಕೆ ಸಮಗ್ರ ಪ್ರಶಸ್ತಿ

ಸಿಬಿಎಸ್‌ಇ ದಕ್ಷಿಣ ವಲಯ-2 ಈಜು ಚಾಂಪಿಯನ್‌ಷಿಪ್‌
Published : 13 ಸೆಪ್ಟೆಂಬರ್ 2024, 15:57 IST
Last Updated : 13 ಸೆಪ್ಟೆಂಬರ್ 2024, 15:57 IST
ಫಾಲೋ ಮಾಡಿ
Comments

ದಾವಣಗೆರೆ: ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಸಿಬಿಎಸ್‌ಇ ದಕ್ಷಿಣ ವಲಯ-2 ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದೆ. 

ನಗರದ ಹೊರ ವಲಯದ ತೋಳಹುಣಸೆಯಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆಯ ಈಜುಕೊಳದಲ್ಲಿ ಸೆ.10 ರಿಂದ 12ರವರೆಗೆ ನಡೆದ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಒಟ್ಟು 278 ಅಂಕಗಳನ್ನು ಗಳಿಸಿ ಈ ಸಾಧನೆ ಮಾಡಿತು. 

ಎರ್ನಾಕುಲಂನ ವಿಶ್ವಜ್ಯೋತಿ ಪಬ್ಲಿಕ್‌ ಶಾಲೆ (265) ಮತ್ತು ಬೆಂಗಳೂರಿನ ಕೋಣನಕುಂಟೆ ಕ್ರಾಸ್‌ನಲ್ಲಿರುವ ಡೆಲ್ಲಿ ಪಬ್ಲಿಕ್‌ ಶಾಲೆ (191) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದವು. 

11, 14, 17 ಮತ್ತು 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗೋವಾ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಡಿಯು ಮತ್ತು ದಾಮನ್‌ನ ಸಿಬಿಎಸ್‌ಇ ಶಾಲೆಗಳ ಈಜುಪಟುಗಳು ಪಾಲ್ಗೊಂಡಿದ್ದರು. 

ವೈಯಕ್ತಿಕ ಚಾಂಪಿಯನ್ನರು: 11 ವರ್ಷದೊಳಗಿನ ಬಾಲಕಿಯರು: ಜೋರ್ನಾ ಸಿಸೋಡಿಯಾ (ಪ್ರೆಸಿಡೆನ್ಸಿ ಶಾಲೆ, ಯಲಹಂಕ, ಬೆಂಗಳೂರು; 21 ಪಾಯಿಂಟ್ಸ್‌), ಬಾಲಕರು: ರುಥ್ವಾ ಎಸ್‌. (ಸೇಂಟ್‌ ಥಾಮಸ್‌ ಸ್ಕೂಲ್‌, ಮೈಸೂರು; 21 ಪಾ.), 14 ವರ್ಷದೊಳಗಿನ ಬಾಲಕಿಯರು: ತ್ರಿಶಾ ಸಿಂಧು ಎಸ್‌. (ವ್ಯಾಸ ಇಂಟರ್‌ನ್ಯಾಷನಲ್‌ ಶಾಲೆ, ವಿದ್ಯಾರಣ್ಯಪುರ, ಬೆಂಗಳೂರು; 28 ಪಾ.), ಬಾಲಕರು: ಶರಣ್‌ ಎಸ್‌. (ಜೈನ್‌ ಹೆರಿಟೇಜ್‌ ಸ್ಕೂಲ್‌, ಕೆಂಪಾಪುರ, ಬೆಂಗಳೂರು; 28 ಪಾ.), 17 ವರ್ಷದೊಳಗಿನ ಬಾಲಕಿಯರು: ಅಂಜಲಿ ಅರುಣ್‌ ಹೊಸಕೆರೆ (ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಹೋಂ, ಬೆಂಗಳೂರು; 30 ಪಾ.), ಬಾಲಕರು: ಸೈಶ್‌ ಕಿಣಿ (ಏರ್‌ಫೋರ್ಸ್‌ ಸ್ಕೂಲ್‌, ಹೆಬ್ಬಾಳ, ಬೆಂಗಳೂರು; 35 ಪಾ.), 19 ವರ್ಷದೊಳಗಿನ ಬಾಲಕಿಯರು: ರುಜುಲಾ ಎಸ್‌. (ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬೆಂಗಳೂರು; 35 ಪಾ.), ಬಾಲಕರು: ಜೋಸೆಫ್‌ ವಿ.ಜೋಸ್‌ (ವಿಶ್ವಜ್ಯೋತಿ ಪಬ್ಲಿಕ್ ಶಾಲೆ) ಮತ್ತು ಸೋಹನ್‌ ಮಂಡಲ್‌ (ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ನಾರ್ತ್‌, ಬೆಂಗಳೂರು)–(ಇಬ್ಬರೂ ತಲಾ 31 ಪಾ.).   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT