ಬರ್ಮಿಂಗ್ಹ್ಯಾಂ: ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರ ವೈಯಕ್ತಿಕ ಕೋಚ್ ಸಂಧ್ಯಾ ಗುರುಂಗ್ ಅವರಿಗೆ ಮಂಗಳವಾರ, ಕಾಮನ್ವೆಲ್ತ್ ಕ್ರೀಡಾಕೂಟದ ಮಾನ್ಯತಾ ಪತ್ರ ದೊರೆತಿದೆ.

‘ಮಾನ್ಯತಾಪತ್ರ ದೊರೆಯದ ಕಾರಣ ನನ್ನ ಕೋಚ್ ಸಂಧ್ಯಾ ಅವರಿಗೆ ಬರ್ಮಿಂಗ್ಹ್ಯಾಂನ ಕ್ರೀಡಾಗ್ರಾಮಕ್ಕೆ ಪ್ರವೇಶ ದೊರೆತಿಲ್ಲ’ ಎಂದು ಲವ್ಲಿನಾ ಸೋಮವಾರ ‘ಟ್ವೀಟ್’ ಮಾಡಿದ್ದರು. ‘ಭಾರತ ಬಾಕ್ಸಿಂಗ್ ಫೆಡರೇಷನ್ ಅಧಿಕಾರಿಗಳು ನನ್ನ ಕೋಚ್ಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

ಇದೀಗ ಅವರಿಗೆ ಮಾನ್ಯತಾಪತ್ರ ಲಭಿಸಿದ್ದು, ವಿವಾದ ಬಗೆಹರಿದಂತಾಗಿದೆ. ‘ಸಂಧ್ಯಾ ಅವರಿಗೆ ಕ್ರೀಡಾಕೂಟದ ಮಾನ್ಯತಾಪತ್ರ ದೊರಕಿಸಿಕೊಡಲಾಗಿದ್ದು, ಬಾಕ್ಸರ್ಗಳು ವಾಸ್ತವ್ಯ ಹೂಡಿರುವ ಕ್ರೀಡಾಗ್ರಾಮಕ್ಕೆ ಮಂಗಳವಾರ ಬೆಳಿಗ್ಗೆ ಪ್ರವೇಶ ಲಭಿಸಿದೆ. ಅವರು ಈಗ ತಂಡದ ಜೊತೆ ಇದ್ದಾರೆ’ ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಬಡ್ಡಿ ಆಟದ ವೇಳೆ ಹೃದಯ ಸ್ತಂಭನಕ್ಕೆ ಒಳಗಾಗಿ ಯುವಕ ದಾರುಣ ಸಾವು: ವಿಡಿಯೊ ವೈರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.