ಮುಂಬೈ: ದೆಹಲಿಯ ಆಶಾ ಶರ್ಮಾ ಮತ್ತು ಪೂಜಾ ಬಾತ್ರ ಅವರು ಇಲ್ಲಿ ಮಂಗಳವಾರ ಆರಂಭವಾದ ಮಹಿಳೆಯರ ರಾಷ್ಟ್ರೀಯ ರ್ಯಾಂಕಿಂಗ್ ಬ್ರಿಡ್ಜ್ ಚಾಂಪಿಯನ್ಷಿಪ್ನಲ್ಲಿ ಮೊದಲ ದಿನದ ಗೌರವ ಗಳಿಸಿದರು.

ಆಶಾ ಮತ್ತು ಪೂಜಾ ಅವರು ಈಚೆಗೆ ಅರ್ಜೆಂಟೀನಾದಲ್ಲಿ ನಡೆದಿದ್ದ ಬ್ರಿಡ್ಜ್ ಒಲಿಂಪಿಯಾಡ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಅವರು ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೂರು ಎಲಿಮಿನೇಷನ್ ಸುತ್ತುಗಳ ನಂತರ 81 ಐಎಂಪಿಯೊಂದಿಗೆ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. ಮುಂಬೈನ ಮೆರಿಯನ್ ಕರ್ಮಾರ್ಕರ್ ಮತ್ತು ಅದಿತಿ ಝವೇರಿ (76 ಐಎಂಪಿ) ಮತ್ತು ಗುಜರಾತಿನ ವಿದ್ಯಾ ಪಟೇಲ್ ಹಾಗೂ ಕಲ್ಪನಾ ಗುರ್ಜರ್ (72 ಐಎಂಪಿ) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಬೇರೆಬೇರೆ ರಾಜ್ಯಗಳ ಒಟ್ಟು 35 ಜೋಡಿಗಳು ಭಾಗವಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.