ಪಟಿಯಾಲ: ಹೀಟ್ಸ್ ಸಂದರ್ಭದಲ್ಲಿ ಗಾಯಗೊಂಡ ಸ್ಪ್ರಿಂಟರ್ ಹಿಮಾ ದಾಸ್ ಇಲ್ಲಿ ನಡೆಯುತ್ತಿರುವ ಅಂತರರಾಜ್ಯ ಅಥ್ಲೆಟಿಕ್ ಕೂಟದ 100 ಮೀಟರ್ಸ್ ಓಟದ ಫೈನಲ್ನಿಂದ ಹೊರಗುಳಿದರು. ದ್ಯುತಿ ಚಾಂದ್ ನಾಲ್ಕನೇ ಸ್ಥಾನಕ್ಕೆ ಕುಸಿದು ನಿರಾಸೆಗೆ ಒಳಗಾದರು. ತಮಿಳುನಾಡಿನ ಎಸ್.ಧನಲಕ್ಷ್ಮಿ ವೇಗದ ಓಟಗಾರ್ತಿಯಾದರು.

ಸಂಜೆ ನಡೆದ ಫೈನಲ್ ಸ್ಪರ್ಧೆಯಲ್ಲಿ ಧನಲಕ್ಷ್ಮಿ 11.52 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಶ್ರೀಲಂಕಾದ ಅಮಾಶ ಡಿ ಸಿಲ್ವಾ (11.59 ಸೆಕೆಂಡು) ದ್ವಿತೀಯ ಸ್ಥಾನ ಗಳಿಸಿದರೆ ತಮಿಳುನಾಡಿನ ಅರ್ಚನಾ ಸುಶೀಂದ್ರನ್ (11.60 ಸೆಕೆಂಡು) ಮೂರನೆಯವರಾದರು. ರಾಷ್ಟ್ರೀಯ ದಾಖಲೆ ಹೊಂದಿರುವ ದ್ಯುತಿ ಚಾಂದ್ ಗುರಿ ತಲುಪಲು 11.62 ಸೆಕೆಂಡು ತೆಗೆದುಕೊಂಡರು. ಕೆಲವೇ ದಿನಗಳ ಹಿಂದೆ ನಡೆದ ಇಂಡಿಯನ್ ಗ್ರ್ಯಾನ್ ಪ್ರಿ–4ರಲ್ಲಿ ಅವರು11.17 ಸೆಕೆಂಡುಗಳ ಸಾಧನೆ ಮಾಡಿದ್ದರು.

ದ್ಯುತಿ ಅವರ ಒಲಿಂಪಿಕ್ಸ್ ಅರ್ಹತೆಗೆ ಯಾವ ಧಕ್ಕೆಯೂ ಆಗಲಿಲ್ಲ. ವಿಶ್ವ ರ್ಯಾಂಕಿಂಗ್ನಲ್ಲಿ 41ನೇ ಸ್ಥಾನದಲ್ಲಿರುವ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿರುವವರ ಪಟ್ಟಿಯಲ್ಲಿ ಈಗಾಗಲೇ ಸೇರಿದ್ದಾರೆ. 100 ಮೀಟರ್ಸ್ ಓಟದಲ್ಲಿ ಒಟ್ಟು 56 ಮಂದಿ ಪಾಲ್ಗೊಳ್ಳಲಿದ್ದಾರೆ.

ದೀರ್ಘಕಾಲದಿಂದ ಬೆನ್ನುನೋವಿನ ಸಮಸ್ಯೆ ಅನುಭವಿಸುತ್ತಿರುವ ಹಿಮಾ ದಾಸ್ ಶನಿವಾರ ಬೆಳಿಗ್ಗೆ ನಡೆದ ಹೀಟ್ಸ್ ವೇಳೆ ಕಾಲಿನ ಮಾಂಸಖಂಡದ ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಫೈನಲ್ನಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಅವರ ಒಲಿಂಪಿಕ್ಸ್ ಕನಸಿಗೂ ಇದು ಅಡ್ಡಿಯಾಗಿದೆ. ಭಾನುವಾರ ನಡೆಯಲಿರುವ 200 ಮೀಟರ್ಸ್ ಓಟದಲ್ಲೂ ಕೊನೆಯ ದಿನವಾದ 29ರಂದು ನಡೆಯಲಿರುವ4x100 ರಿಲೆಯಲ್ಲೂ ಅವರು ಪಾಲ್ಗೊಳ್ಳುವುದು ಅನುಮಾನ. ರಿಲೆ ತಂಡದ ಒಲಿಂಪಿಕ್ಸ್ ಕನಸಿಗೂ ಅವರ ಗಾಯದ ಸಮಸ್ಯೆ ಅಡ್ಡಿಯಾಗುವ ಆತಂಕವಿದೆ.

100 ಮೀಟರ್ಸ್: ಗುರುವಿಂದರ್ ದಾಖಲೆ

ಪುರುಷರ 100 ಮೀಟರ್ಸ್ ಓಟದಲ್ಲಿ ಪಂಜಾಬ್ನ ಗುರುವಿಂದರ್ ಸಿಂಗ್ ಮೊದಲ ಸ್ಥಾನ ಗಳಿಸಿದರು.10.27 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು. ಈ ಮೂಲಕ ಕೂಟ ದಾಖಲೆ ಬರೆದರು. ಪಂಜಾಬ್ನ ಲೊವ್ ಪ್ರೀತ್ ಸಿಂಗ್ (10.47) ಮತ್ತು ಒಡಿಶಾದ ಅಮಿಯಾ ಕುಮಾರ್ ಮಲಿಕ್ (10.49) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.

ಎರಡನೇ ದಿನದ ಫಲಿತಾಂಶಗಳು: ಪುರುಷರ 100 ಮೀಟರ್ಸ್ ಓಟ: ಗುರುವಿಂದರ್ ಸಿಂಗ್ (ಪಂಜಾಬ್)–1. ಕಾಲ:10.27 ಸೆಕೆಂಡು (ಕೂಟ ದಾಖಲೆ. ಹಳೆಯ ದಾಖಲೆ ಕೃಷ್ಣಕುಮಾರ್ ರಾಣೆ 2014. ಕಾಲ: 10.32); ಲೊವ್ನೀತ್ ಸಿಂಗ್ (ಪಂಜಾಬ್)–2, ಅಮಿಯಾ ಕುಮಾರ್ ಮಲಿಕ್ (ಒಡಿಶಾ)–3; 400 ಮೀ ಹರ್ಡಲ್ಸ್: ಎಂ.ಪಿ.ಜಬೀರ್ (ಕೇರಳ)–1. ಕಾಲ:49.78 ಸೆ, ಕೆ.ಸತೀಶ್ (ತಮಿಳುನಾಡು)–2. ಪ್ರವೀಣ್ ಕುಮಾರ್ (ತಮಿಳುನಾಡು)–3. ಹೈಜಂಪ್: ತೇಜಸ್ವಿನ್ ಶಂಕರ್ (ದೆಹಲಿ)–1. ಎತ್ತರ:2.20 ಮೀಟರ್ಸ್, ಜಿಯೊ ಜೋಸ್ (ಕೇರಳ)–2, ಟಿ.ಆರೋಮಲ್ (ಕೇರಳ)–3; ಹ್ಯಾಮರ್ ಥ್ರೋ: ದಮನೀತ್ ಸಿಂಗ್ (ಪಂಜಾಬ್)–1. ದೂರ: 62.03 ಮೀ, ನೀರಜ್ ಕುಮಾರ್ (ರಾಜಸ್ತಾನ)–2, ರವಿ (ಹರಿಯಾಣ)–3.

ಮಹಿಳೆಯರ 100 ಮೀಟರ್ಸ್ ಓಟ: ಎಸ್.ಧನಲಕ್ಷ್ಮಿ (ತಮಿಳುನಾಡು)–1. ಕಾಲ:11.52 ಸೆಕೆಂಡು, ಅಮಾಶ ಡಿ ಸಿಲ್ವ (ಶ್ರೀಲಂಕಾ)–2, ಅರ್ಚನಾ ಸುಶೀಂದ್ರನ್ (ತಮಿಳುನಾಡು)–3. 400 ಮೀ ಹರ್ಡಲ್ಸ್: ವಿ.ಕೆ.ಶಾಲಿನಿ (ಕೇರಳ)–1. ಕಾಲ:1:01.63 ನಿ, ಖುಷ್ದೀಪ್ ಕೌರ್ (ಪಂಜಾಬ್)–2, ನಿರ್ಮಲ್ ಪೂನಿಯಾ (ಹರಿಯಾಣ)–3. ಲಾಂಗ್ ಜಂಪ್: ಶೈಲಿ ಸಿಂಗ್ (ಉತ್ತರಪ್ರದೇಶ)–1. ಅಂತರ: 6.48 ಮೀ, ಎ.ಶರೀನ್ (ತಮಿಳುನಾಡು)–2, ರೇಣು (ಹರಿಯಾಣ)–3; ಶಾಟ್ಪಟ್: ಮನ್ಪ್ರೀತ್ ಕೌರ್ (ಪಂಜಾಬ್)–1. ಅಂತರ: 16.95 ಮೀ, ಸೃಷ್ಟಿ ವಿಗ್ (ದೆಹಲಿ)–2, ಕಿರಣ್ ಬಲಿಯನ್ (ಉತ್ತರ ಪ್ರದೇಶ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.