ನವದೆಹಲಿ: ದಕ್ಷಿಣ ಕೊರಿಯಾದ ಚಾಂಗ್ವೊನ್ನಲ್ಲಿ ಏಷ್ಯನ್ ಶೂಟಿಂಗ್ ಚಾಂಪಿಯನ್ಷಿಪ್ ಭಾನುವಾರ ಆರಂಭವಾಗಲಿದ್ದು, ಭಾರತದ ಶೂಟರ್ಗಳಿಗೆ, ವಿಶೇಷವಾಗಿ ಪಿಸ್ತೂಲ್ ಶೂಟರ್ಗಳಿಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ಕೋಟಾ ಪಡೆಯುವ ಸುವರ್ಣ ಅವಕಾಶ ಇದೆ.

ಇತ್ತೀಚೆಗೆ ಹಾಂಗ್ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ಗಳ ಪ್ರದರ್ಶನ ಗಮನ ಸೆಳೆದಿತ್ತು. ಈಗಾಗಲೇ ಭಾರತದ ಏಳು ಮಂದಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ಆದರೆ ಪಿಸ್ತೂಲ್ ವಿಭಾಗದಲ್ಲಿ ಯಾರಿಗೂ ಕೋಟಾ ದೊರಕಿಲ್ಲ. ಹೀಗಾಗಿ ಇಲ್ಲಿ ಮನು ಭಾಕರ್, ಇಶಾ ಸಿಂಗ್, ರಿದಮ್ ಸಂಗ್ವಾನ್, ಪಲಕ್, ಅನಿಶ್ ಭಾನಾವಾಲಾ, ವಿಜಯವೀರ್ ಸಿಧು ಮತ್ತು ಶಿವ ನರ್ವಾಲ್ ಅವರ ಮೇಲೆ ಹೆಚ್ಚಿನ ಗಮನ ಇದೆ.

12 ಸ್ಪರ್ಧೆಗಳಲ್ಲಿ ಒಟ್ಟು ಒಲಿಂಪಿಕ್ಸ್ನ 24 ಕೋಟಾಗಳನ್ನು ಪಡೆಯಲು ಇಲ್ಲಿ ಗುರಿಕಾರರಿಗೆ ಅವಕಾಶವಿದೆ. ಒಲಿಂಪಿಕ್ ಕೋಟಾ ಇರುವ ಕಾರಣ ಏಷ್ಯನ್ ಕೂಟದಲ್ಲಿ ಹೆಚ್ಚಿನ ಪೈಪೋಟಿ ಎದುರಾಗುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.