ಪುಣೆ: ಸಚಿನ್ ಮತ್ತು ಕೆ.ಪ್ರಪಂಜನ್ ಅವರ ಅಮೋಘ ಆಟದ ನೆರವಿನಿಂದ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಗೆದ್ದಿದೆ.

ಛತ್ರಪತಿ ಶಿವಾಜಿ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ನಡೆದ ಹೋರಾಟದಲ್ಲಿ ಫಾರ್ಚೂನ್‌ಜೈಂಟ್ಸ್ 35–20 ಪಾಯಿಂಟ್ಸ್‌ನಿಂದ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿತು. ಇದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.

ಗುಜರಾತ್ ತಂಡದ ಸಚಿನ್ ಏಳು ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು. ಪ್ರಪಂಜನ್ ಮತ್ತು ಸುನಿಲ್ ಕುಮಾರ್ ಅವರು ಕ್ರಮವಾಗಿ ಐದು ಮತ್ತು ನಾಲ್ಕು ಪಾಯಿಂಟ್ಸ್ ಕಲೆಹಾಕಿದರು.

ಮೊದಲ ಐದು ನಿಮಿಷಗಳಲ್ಲಿ ಉಭಯ ತಂಡಗಳು 5–5ರಿಂದ ಸಮಬಲ ಸಾಧಿಸಿದವು. ನಂತರ ಫಾರ್ಚೂನ್‌ಜೈಂಟ್ಸ್ ಪಾರಮ್ಯ ಮೆರೆಯಿತು. 11ನೇ ನಿಮಿಷದಲ್ಲಿ ಎದುರಾಳಿಗಳನ್ನು ಆಲೌಟ್ ಮಾಡಿದ ಈ ತಂಡ 20–11ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲೂ ಫಾರ್ಚೂನ್‌ಜೈಂಟ್ಸ್ ಮಿಂಚಿತು. 35ನೇ ನಿಮಿಷದ ಆಟ ಮುಗಿದಾಗ ಈ ತಂಡ 32–17 ಪಾಯಿಂಟ್ಸ್‌ನಿಂದ ಮುಂದಿತ್ತು. ನಂತರವೂ ಈ ತಂಡದ ಆಟಗಾರರು ಚುರುಕಿನ ರೇಡಿಂಗ್ ಮತ್ತು ಟ್ಯಾಕ್ಲಿಂಗ್ ಮೂಲಕ ಪಾಯಿಂಟ್ಸ್ ಕಲೆಹಾಕಿ ಅಭಿಮಾನಿಗಳನ್ನು ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.