ಹಾಂಗ್‌ಕಾಂಗ್: ವಿಶ್ವ ಚಾಂಪಿಯನ್ ಪಿ.ವಿ. ಸಿಂಧು, ಹಾಂಗ್‌ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನೇರ ಗೇಮ್‌ಗಳ ವಿಜಯದೊಡನೆ ಶುಭಾರಂಭ ಮಾಡಿದರು. ಆದರೆ ಸೈನಾ ನೆಹ್ವಾಲ್ ಮತ್ತು ಸಮೀರ್ ವರ್ಮಾ ಅವರು ಬುಧವಾರ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಇತ್ತೀಚಿನ ಟೂರ್ನಿಗಳಲ್ಲಿ ಹಿನ್ನಡೆ ಅನುಭವಿಸುತ್ತ ಬಂದಿರುವ ಆರನೇ ಶ್ರೇಯಾಂಕದ ಸಿಂಧು ಮಹಿಳೆಯರ ಸಿಂಗಲ್ಸ್‌ನಲ್ಲಿ ಕೊರಿಯಾದ ಕಿಮ್ ಗ ಯುನ್ ಅವರನ್ನು 21–15, 21–16ರಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಸಿಂಧು ಅವರ ಮುಂದಿನ ಎದುರಾಳಿ ಥಾಯ್ಲೆಂಡ್‌ನ ಬುಸನನ್ ಒಂಗ್ಬಾಮ್‌ರಂಗಫಾನ್.

ಆದರೆ ಸೈನಾ ಸೋಲಿನ ಸರಪಣಿ ಮುಂದುವರಿದಿದೆ. ಎಂಟನೇ ಶ್ರೇಯಾಂಕದ ಭಾರತದ ಆಟಗಾರ್ತಿ 13–21, 20–22ರಲ್ಲಿ ಚೀನಾ ಕೈ ಯಾನ್ ಯಾನ್ ಅವರಿಗೆ ಸತತ ಎರಡನೇ ಬಾರಿ ಸೋತರು. ಸೈನಾ ಅವರು ಕಳೆದ ಆರು ಟೂರ್ನಿಗಳ ಪೈಕಿ ಐದರಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮನ ಕಂಡಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 16ನೇ ಸ್ಥಾನದಲ್ಲಿರುವ ಸಮೀರ್ 11–21, 21–13, 8–21 ರಲ್ಲಿ ಚೀನಾ ರೈಪಿಯ ವಾಂಗ್ ತ್ಸು ವೀ ಅವರಿಗೆ 54 ನಿಮಿಷಗಳ ಸೆಣಸಾಟದಲ್ಲಿ ಮಣಿದರು. ಅವರು ಸತತ ಮೂರನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.