ಚೆಂಗ್‌ಜು, ದಕ್ಷಿಣ ಕೊರಿಯಾ: ಸೌರಷ್ ಘೋಷಾಲ್ ಅವರನ್ನೊಳಗೊಂಡ ಭಾರತ ಪುರುಷರ ತಂಡವು ಏಷ್ಯನ್ ಸ್ಕ್ವಾಷ್ ತಂಡ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಇದೇ ಮೊದಲ ಬಾರಿ ಈ ಸಾಧನೆ ಮಾಡಿದ ಶ್ರೇಯ ಗಳಿಸಿದೆ.

ಶುಕ್ರವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 2–0ಯಿಂದ ಕುವೈತ್ ತಂಡವನ್ನು ಪರಾಭವಗೊಳಿಸಿತು.

ಮೊದಲ ಪಂದ್ಯದಲ್ಲಿ ಭಾರತದ ರಮಿತ್ ಟಂಡನ್11-5, 11-7, 11-4ರಿಂದ ಅಲಿ ಅಲಮೇಜಿ ಎದುರು ಗೆದ್ದು ಮುನ್ನಡೆ ಮುನ್ನಡೆ ತಂದುಕೊಟ್ಟರು. ಬಳಿಕ ಸೌರವ್11-9, 11-2, 11-3ರಿಂದ ಅಮ್ಮಾರ್ ಅಲ್ಟಾಮಿಮಿ ಅವರನ್ನು ಪರಾಭವಗೊಳಿಸಿದರು.

ಇವೆರಡೇ ಪಂದ್ಯಗಳಲ್ಲಿ ಫಲಿತಾಂಶ ನಿರ್ಧಾರವಾದ್ದರಿಂದ ಅಭಯ್ ಸಿಂಗ್ ಮತ್ತು ಫಲಾಹ್ ಮೊಹಮ್ಮದ್ ನಡುವಣ ಹಣಾಹಣಿ ನಡೆಯಲಿಲ್ಲ.

ಹಿಂದಿನ ಎರಡು ಆವೃತ್ತಿಗಳಲ್ಲಿ ಬೆಳ್ಳಿ ಪದಕ ಜಯಿಸಿದ್ದ ಭಾರತ ಈ ಬಾರಿ ಶ್ರೇಷ್ಠ ಸಾಮರ್ಥ್ಯದ ಮೂಲಕ ಚಿನ್ನ ಒಲಿಸಿಕೊಂಡಿತು. ಎ ಗುಂಪಿನಲ್ಲಿ ಕತಾರ್, ಪಾಕಿಸ್ತಾನ, ಕುವೈತ್, ದಕ್ಷಿಣ ಕೊರಿಯಾ ಮತ್ತು ಚೀನಾ ತೈಪೆ ತಂಡಗಳನ್ನು ಸೋಲಿಸಿ ಅಗ್ರಸ್ಥಾನ ಗಳಿಸಿದ್ದ ಭಾರತ, ನಾಲ್ಕರ ಘಟ್ಟದಲ್ಲಿ 2–1ರಿಂದ ಮಲೇಷ್ಯಾ ತಂಡವನ್ನು ಮಣಿಸಿತ್ತು.

ಮಹಿಳಾ ತಂಡಕ್ಕೆ ಕಂಚು: ಭಾರತ ಮಹಿಳಾ ತಂಡವು ಸೆಮಿಫೈನಲ್‌ನಲ್ಲಿ 1–2ರಿಂದ ಮಲೇಷ್ಯಾ ಎದುರು ಸೋತು ಕಂಚು ತನ್ನದಾಗಿಸಿಕೊಂಡಿತು. ಬಿ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿದ್ದ ಭಾರತ ತಂಡವು ಇರಾನ್ ಹಾಗೂ ಸಿಂಗಪುರ ವಿರುದ್ಧ 3–0ಯಿಂದ ಗೆದ್ದರೆ, ಹಾಂಗ್‌ಕಾಂಗ್ ಎದುರು 0–3ರಿಂದ ಸೋಲು ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.