ದುಬೈ: ಭಾರತದ ಜೀವ್ ಮಿಲ್ಖಾ ಸಿಂಗ್ ಅವರು 10 ವರ್ಷಗಳ ಅವಧಿಗೆ ಪ್ರತಿಷ್ಠಿತ ದುಬೈ ಗೋಲ್ಡನ್ ವೀಸಾ ಪಡೆದ ವಿಶ್ವದ ಮೊದಲ ಗಾಲ್ಫ್ ಆಟಗಾರ ಎನಿಸಿಕೊಂಡಿದ್ದಾರೆ. ಕ್ರೀಡೆಯಲ್ಲಿ ತೋರಿದ ಅತ್ಯುತ್ತಮ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಈ ಗೌರವ ನೀಡಲಾಗಿದೆ.

49 ವರ್ಷದ ಜೀವ್ ಅವರು ಸುದೀರ್ಘ ಅವಧಿಗೆ ದುಬೈ ಒಡನಾಟ ಹೊಂದಿದ್ದು, ಹಲವು ಟೂರ್ನಿಗಳಲ್ಲಿ ಭಾಗವಹಿಸಿದ್ದು ಅಲ್ಲದೆ ನಗರದಲ್ಲಿ ಅನೇಕ ಸ್ನೇಹಿತರನ್ನು ಸಂಪಾದಿಸಿದ್ದಾರೆ.

‘ದುಬೈ ಸರ್ಕಾರವು ನನ್ನನ್ನು ಗೋಲ್ಡನ್ ವೀಸಾಗೆ ಪರಿಗಣಿಸಿರುವುದು ನನಗೆ ನಿಜಕ್ಕೂ ಗೌರವ ಸಂಗತಿ. ಮತ್ತು ಇಲ್ಲಿ ಇನ್ನೂ ಅನೇಕ ವಿಶೇಷ ನೆನಪುಗಳನ್ನು ಉಳಿಸಲು ಎದುರು ನೋಡುತ್ತಿದ್ದೇನೆ’ ಎಂದು ಜೀವ್ ತಿಳಿಸಿದ್ದಾರೆ.

2001ರ ದುಬೈ ಡಸರ್ಟ್ ಕ್ಲಾಸಿಕ್ ಟೂರ್ನಿಯಲ್ಲಿ ನಾಲ್ಕು ಸುತ್ತುಗಳನ್ನು ಪೂರ್ಣಗೊಳಿಸಿದ್ದ ಜೀವ್ ಅವರು ವಿಶ್ವದಾಖಲೆ ಸ್ಥಾಪಿಸಿದ್ದರು.ಯೂರೋಪಿಯನ್ ಹಾಗೂ ಜಪಾನ್ ಟೂರ್ನಿಗಳಲ್ಲಿ ತಲಾ ನಾಲ್ಕು ಬಾರಿ ಮತ್ತು ಏಷ್ಯನ್ ಟೂರ್ನಿಗಳಲ್ಲಿ ಆರು ಬಾರಿ ಅವರು ಪ್ರಶಸ್ತಿ ಜಯಿಸಿದ್ದಾರೆ.

‘1993ರಲ್ಲಿ ಮೊದಲ ಬಾರಿ ನಾನು ದುಬೈಗೆ ಬಂದೆ ಎನಿಸುತ್ತದೆ. ಇಲ್ಲಿರುವ ಎಲ್ಲ ಗಳಿಗೆಯನ್ನೂ ಆನಂದಿಸಿದ್ದೇನೆ‘ ಎಂದು ಜೀವ್ ಹೇಳಿದ್ದಾರೆ.ಜೀವ್ ಅವರು ಭಾರತದ ದಿಗ್ಗಜ ಅಥ್ಲೀಟ್ ದಿವಂಗತ ಮಿಲ್ಖಾ ಸಿಂಗ್ ಅವರ ಪುತ್ರ.ಇತ್ತೀಚೆಗೆ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೂಡ ದುಬೈ ಗೋಲ್ಡನ್ ವೀಸಾ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.