ನವದೆಹಲಿ: ಭಾರತದ ಯುವ ರೇಸಿಂಗ್ ಸ್ಪರ್ಧಿ ಜೆಹಾನ್ ದಾರುವಾಲಾ ಅವರು ಫಾರ್ಮುಲಾ ಒನ್ ರೇಸ್ನಲ್ಲಿ ಪಾಲ್ಗೊಳ್ಳಬೇಕೆಂಬ ಕನಸು ಈಡೇರಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಫಾರ್ಮುಲಾ ಒನ್ ರೇಸ್ನಲ್ಲಿ ಎಂಟು ಬಾರಿ ಚಾಂಪಿಯನ್ ಆಗಿರುವ ಮೆಕ್ಲಾರೆನ್ ತಂಡದಲ್ಲಿ ಎರಡು ದಿನ ಟೆಸ್ಟ್ ಡ್ರೈವ್ ಮಾಡುವ ಅವಕಾಶ ಅವರಿಗೆ ಒಲಿದಿದೆ. ಜೂನ್ 21 ಮತ್ತು 22 ರಂದು ಅವರು ಇಂಗ್ಲೆಂಡ್ನ ಸಿಲ್ವರ್ಸ್ಟೋನ್ನಲ್ಲಿರುವಟ್ರ್ಯಾಕ್ನಲ್ಲಿ ಮೆಕ್ಲಾರೆನ್ ತಂಡದ ಎಫ್1 ಕಾರು (ಎಂಸಿಎಲ್ 35) ಚಲಾಯಿಸಲಿದ್ದಾರೆ.

ಫಾರ್ಮುಲಾ 2 ಸ್ಪರ್ಧೆಗಳಲ್ಲಿ ಮೂರು ವರ್ಷಗಳಿಂದ ಪಾಲ್ಗೊಳ್ಳುತ್ತಿರುವ ಜೆಹಾನ್ ಅವರಿಗೆ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಎಫ್1 ಕಾರು ಚಲಾಯಿಸುವ ಅವಕಾಶ ದೊರೆತಿದೆ.

ಪರೀಕ್ಷಾರ್ಥ ಚಾಲನೆಯಲ್ಲಿ ಉತ್ತಮ ಸಮಯವನ್ನು ಕಂಡುಕೊಂಡರೆ, ’ಸೂಪರ್ ಲೈಸೆನ್ಸ್‘ಗೆ ಅರ್ಜಿ ಸಲ್ಲಿಸುವ ಅವಕಾಶ ಅವರಿಗೆ ದೊರೆಯಲಿದೆ.

’ಮೆಕ್ಲಾರೆನ್ ತಂಡದ ಪರೀ ಕ್ಷಾರ್ಥ ಚಾಲನೆಯ ಅವಕಾಶ ಲಭಿಸಿರುವುದು ಸಂತಸದ ಸಂಗತಿ. ನಾನು ಒಮ್ಮೆಯೂ ಎಫ್1 ಕಾರು ಚಲಾಯಿಸಿಲ್ಲ. ಕಾರಿನ ಬಗ್ಗೆ ತಿಳಿದುಕೊಳ್ಳುವ ಅವಕಾಶ ಲಭಿಸಿದೆ‘ ಎಂದು ಜೆಹಾನ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.