ನವದೆಹಲಿ: ‘ತರಬೇತಿಯನ್ನು ಮುಂದುವರಿಸಿ ಎಂದು ಕ್ರೀಡಾಪಟುಗಳಿಗೆ ಹೇಳುತ್ತಿರುವ ಐಒಸಿ ಜೋಕ್ ಮಾಡುತ್ತಿದೆಯೇ?’ ಎಂದು ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ತರಬೇತಿ ಕೇಂದ್ರಗಳು, ಕ್ರೀಡಾಂಗಣಗಳ ಬಾಗಿಲುಗಳು ಮುಚ್ಚಿವೆ. ಆದರೆ ಗುರುವಾರ ಹೇಳಿಕೆ ನೀಡಿರುವ ಐಒಸಿಯು, ನಿಗದಿತ ಸಮದಯಲ್ಲೇ ಒಲಿಂಪಿಕ್ಸ್ ನಡೆಯಲಿದೆ. ತರಬೇತಿಯನ್ನು ಮುಂದುವರಿಸಿ ಎಂದಿದೆ.

ಇದರಿಂದ ಕೆರಳಿರುವ ಕಶ್ಯಪ್, ‘ಮೊದಲನೇಯದಾಗಿ ಮುಂಬರುವ ಒಲಿಂಪಿಕ್ಸ್‌ಗೆ ತಂಡವನ್ನು ಆಯ್ಕೆ ಮಾಡಿಲ್ಲ. ಆಯ್ಕೆ ಪ್ರಕ್ರಿಯೆಗಳೂ ಪೂರ್ಣವಾಗಿಲ್ಲ. ಈಗಾಗಲೇ ಆಯ್ಕೆಯಾದವರಿಗ ಅಭ್ಯಾಸ ಮಾಡಲು ಸ್ಥಳವೆಲ್ಲಿದೆ? ಎಲ್ಲ ಅಕಾಡೆಮಿಗಳಿಗೂ ಬೀಗ ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಐಒಸಿಯು ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಅವರು ಈಚೆಗೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು. ಅಲ್ಲಿಂದ ಮರಳಿದ ನಂತರ ಕ್ವಾರಂಟೈನ್‌ಗೆ (ಏಕಾಂತವಾಸ) ಒಳಪಟ್ಟಿದ್ದಾರೆ. ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

ಕೊರೊನಾ ಭೀತಿಯ ನಡುವೆಯೂ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ನಡೆಸಿದ್ದನ್ನು ಕಶ್ಯಪ್ ಪತ್ನಿ ಮತ್ತು ಆಟಗಾರ್ತಿ ಸೈನಾ ನೆಹ್ವಾಲ್ ಬುಧವಾರ ಖಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.