ನವದೆಹಲಿ: ಭಾರತದ ನೀರಜ್ ಗೋಯತ್ ಅವರು ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ಗೆದ್ದಿದ್ದಾರೆ. ಕೆನಡಾದ ಲೀ ಬಾಕ್ಸ್ಟರ್ ಪ್ರೊಮೋಷನ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ನೀರಜ್ ಆಡಿದ ಮೊದಲ ಪಂದ್ಯ ಇದಾಗಿದೆ.

ಶನಿವಾರ ನಡೆದ ಹೋರಾಟದಲ್ಲಿ ನೀರಜ್ ಅವರು ಸ್ಯಾಂಚೆಜ್ ಅವರನ್ನು ಸೋಲಿಸಿದರು.

ಡಬ್ಲ್ಯುಬಿಸಿ ಏಷ್ಯಾ ಪೆಸಿಫಿಕ್ ವೆಲ್ಟರ್ವೇಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ನೀರಜ್, ವೃತ್ತಿಪರ ಬಾಕ್ಸಿಂಗ್ನಲ್ಲಿ ಆಡಿದ 14ನೇ ಪಂದ್ಯ ಇದಾಗಿದೆ. ಈ ಪೈಕಿ ಒಂಬತ್ತರಲ್ಲಿ ವಿಜಯಿಯಾಗಿರುವ ಅವರು ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.

‘ಒಪ್ಪಂದದ ಅನುಸಾರ ಲೀ ಬಾಕ್ಸ್ಟರ್ ಸಂಸ್ಥೆ ನನಗೆ ವರ್ಷಕ್ಕೆ ₹1.5 ಕೋಟಿ ಮೊತ್ತ ನೀಡಲಿದೆ. ಈ ಸಂಸ್ಥೆಯ ಪರ ಆಡಿದ ಮೊದಲ ಪಂದ್ಯದಲ್ಲೇ ಗೆದ್ದಿದ್ದು ಖುಷಿ ನೀಡಿದೆ’ ಎಂದು ಗೋಯತ್ ಹೇಳಿದ್ದಾರೆ.

ನೀರಜ್ ಅವರು ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಮುಂದಿನ ಪಂದ್ಯ ಆಡಲಿದ್ದಾರೆ. ಅವರ ಎದುರಾಳಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.