ನವದೆಹಲಿ: ಕೊಲೆ ಆರೋಪದಲ್ಲಿ ಬಂಧನವಾಗಿರುವ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಭಾನುವಾರ ಹಾಜರುಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರವಾಗಿ ವಿಚಾರಣೆ ಮಾಡಲು ಸುಶೀಲ್ ಅವರನ್ನು 12 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸರ್ಕಾರಿ ಅಭಿಯೋಜಕ ಅತುಲ್ ಶ್ರೀವಾಸ್ತವ ಮನವಿ ಸಲ್ಲಿಸಿದರು.

ವಾದ ಆಲಿಸಿದ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಮನವಿಯನ್ನು ಕಾಯ್ದಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಸುಶೀಲ್ ಅವರನ್ನು ವಿಚಾರಣೆ ನಡೆಸಲು ಪೊಲೀಸರಿಗೆ 30 ನಿಮಿಷಗಳ ಅವಕಾಶವನ್ನೂ ನೀಡಿದ್ದರು.

ಈಚೆಗೆ ಛತ್ರಸಾಲಾ ಕ್ರೀಡಾಂಗಣದಲ್ಲಿ ನಡೆದಿದ್ದ ಜಗಳದಲ್ಲಿ ಹಲ್ಲೆಗೊಳಗಾಗಿದ್ದ 23 ವರ್ಷದ ಕುಸ್ತಿಪಟು ಸಾಗರ್ ಧನಕರ್ ಅಸುನೀಗಿದ್ದರು. ಹಲ್ಲೆ ಮಾಡಿದವರೊಂದಿಗೆ ಸುಶೀಲ್ ಕೂಡ ಇದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.