ಲುಸಾನ್ : ಪಾಕಿಸ್ತಾನದಲ್ಲಿ ಅಲ್ಲಿನ ಹಾಕಿ ಫೆಡರೇಷನ್ ಮತ್ತು ಕ್ರೀಡಾ ಮಂಡಳಿ ಮಧ್ಯೆ ಅಂತಃಕಲಹದ ಪರಿಣಾಮ ಆ ದೇಶದಲ್ಲಿ ನಡೆಯಬೇಕಾಗಿದ್ದ ಪುರುಷರ ಒಲಿಂಪಿಕ್ ಅರ್ಹತಾ ಟೂರ್ನಿಯ ಆತಿಥ್ಯವನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಹಿಂಪಡೆದಿದೆ.

ಈ ಟೂರ್ನಿಯನ್ನು 2024ರ ಜನವರಿ 25 ರಿಂದ 21ರವರೆಗೆ ಒಮಾನ್ ರಾಜಧಾನಿ ಮಸ್ಕತ್‌ನಲ್ಲಿ ನಡೆಸುವುದಾಗಿ ಎಫ್‌ಐಎಚ್ ಹೇಳಿಕೆಯಲ್ಲಿ ಪ್ರಕಟಿಸಿದೆ

ಇತರ ಮೂರು ಒಲಿಂಪಿಕ್ ಕ್ವಾಲಿಫೈಯರ್‌ಗಳು ಚೀನಾ (ಮಹಿಳಾ ವಿಭಾಗ, ಜ. 15ರಿಂದ 21) ಮತ್ತು ಸ್ಪೇನ್‌ನಲ್ಲಿ (ಮಹಿಳಾ ಮತ್ತು ಪುರುಷರ ವಿಭಾಗ, ಜನವರಿ 13 ರಿಂದ 21) ನಡೆಯಲಿವೆ.

ಈ ಮೇಲಿನ ಅರ್ಹತಾ ಟೂರ್ನಿಗಳಿಂದ ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ ಆರು ತಂಡಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ. ಒಷಾನಿಯಾ ಮತ್ತು ಯುರೋಪ್ ವಲಯಗಳ ಅರ್ಹತಾ ಟೂರ್ನಿ ಈಗಾಗಲೇ ನಡೆದಿದೆ.

ಆಸ್ಟ್ರೇಲಿಯಾ ಮತ್ತು ದಿ ನೆದರ್ಲೆಂಡ್ಸ್ ತಂಡಗಳು (ಪುರುಷರ ಮತ್ತು ಮಹಿಳಾ ವಿಭಾಗ) ಈಗಾಗಲೇ (ಕ್ರಮವಾಗಿ) ಒಷಾನಿಯಾ ಕಪ್ ಮತ್ತು ಯುರೊ ಹಾಕಿ ಚಾಂಪಿಯ್‌ಷಿಪ್‌ನಲ್ಲಿ ಗೆದ್ದು ಅರ್ಹತೆ ಪಡೆದಿವೆ. ಫ್ರಾನ್ಸ್ ಆತಿಥೇಯ ಎಂಬ ನೆಲೆಯಲ್ಲಿ ನೇರ ಪ್ರವೇಶ ಪಡೆದಿದೆ.

ಈ ಮೇಲಿನ ಅರ್ಹತಾ ಟೂರ್ನಿಯ ಜೊತೆ ಈಗ ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮತ್ತು ಮುಂಬರುವ ಪ್ಯಾನ್ ಅಮೆರಿಕನ್ ಗೇಮ್ಸ್, ಆಫ್ರಿಕಾ ಹಾಕಿ ಟೂರ್ನಿಯಲ್ಲಿ ಜಯಗಳಿಸುವ ತಂಡಗಳೂ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲಿವೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹಾಕಿ ಸ್ಪರ್ಧೆಗಳು ಜುಲೈ 27 ರಿಂದ ಆಗಸ್ಟ್ 9ರವರೆಗೆ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.