ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Paralympics | ಸೆಮೀಸ್‌ಗೆ ನಿತ್ಯಾಶ್ರೀ; ಪದಕಕ್ಕೆ ಇನ್ನೊಂದೇ ಹೆಜ್ಜೆ

Published : 1 ಸೆಪ್ಟೆಂಬರ್ 2024, 12:50 IST
Last Updated : 1 ಸೆಪ್ಟೆಂಬರ್ 2024, 12:50 IST
ಫಾಲೋ ಮಾಡಿ
Comments

ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಪಟು ಸುಮತಿ ಶಿವನ್ ನಿತ್ಯಾಶ್ರೀ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಆ ಮೂಲದ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇನ್ನೊಂದು ಪಂದ್ಯ ಗೆದ್ದರೆ ನಿತ್ಯಾಶ್ರೀ ಪದಕ ಖಚಿತಪಡಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್ ಎಸ್‌ಎಚ್6 ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ನಿತ್ಯಾಶ್ರೀ, ಪೋಲೆಂಡ್‌ನ ಒಲಿವಿಯಾ ಸ್ಮಿಗಿಲ್ ವಿರುದ್ಧ 21-4 & 21-7ರ ಅಂತರದಲ್ಲಿ ಗೆಲುವು ಗಳಿಸಿದ್ದಾರೆ.

19 ವರ್ಷದ ನಿತ್ಯಾಶ್ರೀ ಅವರು ನಾಳೆ (ಸೆ.2, ಸೋಮವಾರ) ನಡೆಯಲಿರುವ ಸೆಮಿಫೈನಲ್ ಹಣಾಹಣಿಯಲ್ಲಿ ಚೀನಾದ ಲಿನ್ ಶುವಾಂಗ್ಬಾವೊ ಸವಾಲನ್ನು ಎದುರಿಸಲಿದ್ದಾರೆ.

ಭಾರತಕ್ಕೆ ಮತ್ತೊಂದು ಪದಕ ಖಚಿತ...

ಮತ್ತೊಂದೆಡೆ ಬ್ಯಾಡ್ಮಿಂಟನ್ ಎಸ್‌ಯು5 ವಿಭಾಗದ ಸೆಮಿಫೈನಲ್‌ನಲ್ಲಿ ಭಾರತೀಯರೇ ಸ್ಪರ್ಧಿಸಲಿದ್ದು, ಮಗದೊಂದು ಪದಕ ಸಿಗುವುದು ನಿಚ್ಚಳವೆನಿಸಿದೆ.

ಮಹಿಳೆಯರ ಸಿಂಗಲ್ಸ್ ಎಸ್‌ಯು5 ವಿಭಾಗದ ಸೆಮಿಫೈನಲ್‌ನಲ್ಲಿ ಮನೀಷಾ ರಾಮದಾಸ್ ಅವರು ಮುರುಗೇಶನ್ ತುಳಸಿಮತಿ ಸವಾಲನ್ನು ಎದುರಿಸಲಿದ್ದಾರೆ. ಈ ಪಂದ್ಯವು ಸೆಪ್ಟೆಂಬರ್ 2ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT