ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಟೋಕಿಯೊದ ದಾಖಲೆ ಮುರಿದಿರುವ ಭಾರತ, ಚಾರಿತ್ರಿಕ ಸಾಧನೆ ಮಾಡಿದೆ.

2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡವು ಐದು ಚಿನ್ನ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದಿತ್ತು. ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಗಳಿಸಿತ್ತು. ಇದು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿತ್ತು.

ಆದರೆ ಪ್ರಸಕ್ತ ಸಾಗುತ್ತಿರುವ ಪ್ಯಾರಿಸ್ ಪ್ಯಾರಾಲಿಂಕ್ಸ್ ಕ್ರೀಡಾಕೂಟದಲ್ಲಿ ಭಾರತ ಈ ದಾಖಲೆಯನ್ನು ಮುರಿದಿದ್ದು, ಈಗಾಗಲೇ ಮೂರು ಚಿನ್ನ ಸೇರಿದಂತೆ 21 ಪದಕಗಳನ್ನು ಗೆದ್ದುಕೊಂಡಿದೆ.

ಆ ಮೂಲಕ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಅತಿ ಹೆಚ್ಚು ಪದಕಗಳನ್ನು ಗೆದ್ದಿದೆ. ಇದರಲ್ಲಿ ಎಂಟು ಬೆಳ್ಳಿ ಹಾಗೂ 10 ಕಂಚಿನ ಪದಕಗಳು ಸೇರಿವೆ. ಅಲ್ಲದೆ ಸದ್ಯ ಪದಕಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದೆ.

ಪ್ಯಾರಾ ಅಥ್ಲೀಟ್‌ನಲ್ಲಿ ಭಾರತೀಯ ಸ್ಪರ್ಧಿಗಳು 11 ಪದಕಗಳನ್ನು ಗೆದ್ದಿದ್ದಾರೆ. ಇನ್ನು ಪ್ಯಾರಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಐದು, ಪ್ಯಾರಾ ಶೂಟಿಂಗ್ ವಿಭಾಗದಲ್ಲಿ ನಾಲ್ಕು ಮತ್ತು ಪ್ಯಾರಾ ಆರ್ಚರಿ ವಿಭಾಗದಲ್ಲಿ ಒಂದು ಪದಕವನ್ನು ಗೆದ್ದಿದ್ದಾರೆ.

ಈ ಬಾರಿ ಭಾರತದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಅತಿ ಹೆಚ್ಚು 84 ಮಂದಿ ಸ್ಪರ್ಧಾಳುಗಳು ಕಣಕ್ಕಿಳಿದಿದ್ದಾರೆ.

ಪದಕ ಗೆದ್ದ ಭಾರತೀಯರು:
.Paris Paralympics | ಬೆಳ್ಳಿ ಗೆದ್ದ ಭಾರತದ ಶಾಟ್ಪುಟ್ ಪಟು ಸಚಿನ್ ಖಿಲಾರಿ.ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು 'ಅವನಿ' .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.