ನವದೆಹಲಿ: ಭಾರತದ ಯುವ ಬಾಕ್ಸರ್‌ಗಳಾದ ಪಾಯಲ್, ನಿಶಾ ಮತ್ತು ಅಕಾನ್ಶಾ ಅವರು ಅರ್ಮೇನಿಯಾದ ಯೆರವಾನ್‌ನಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಭಾರತದ ಮಂಗಳವಾರ ಮುಕ್ತಾಯಗೊಂಡ ಈ ಕೂಟದಲ್ಲಿ ಒಟ್ಟು 17 ಪದಕಗಳನ್ನು ಗೆದ್ದು ಸ್ಫೂರ್ತಿಯುತ ಪ್ರದರ್ಶನ ನೀಡಿತು.

ಭಾರತದ ಯುವ ಪಡೆ ಈ ಕೂಟದಲ್ಲಿ ಮೂರು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಭಾರತ ಮಹಿಳೆಯರ ತಂಡ ಈ ಕೂಟದಲ್ಲಿ ಜಂಟಿ ಎರಡನೇ ಸ್ಥಾನವನ್ನು ಪಡೆಯಿತು.

ಪಾಯಲ್ 48 ಕೆ.ಜಿ ಫೈನಲ್‌ನಲ್ಲಿ ಅರ್ಮೇನಿಯಾದ ಪೆಟ್ರೊಸಿಯಾನ್ ಹೆಗಿನಿ ಅವರನ್ನು ಸರ್ವಾನುಮತದ ತೀರ್ಪಿನಲ್ಲಿ ಸೋಲಿಸಿ ದೇಶಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟರು.

ಏಷ್ಯನ್ ಯುವ ಚಾಂಪಿಯನ್ನರಾದ ನಿಶಾ ಮತ್ತು ಅಕಾನ್ಶಾ ಅವರ ಯಶಸ್ಸಿನ ಓಟವೂ ಚಿನ್ನ ಗೆಲ್ಲುವವರೆಗೆ ಮುಂದುವರಿಯಿತು. ನಿಶಾ 52 ಕೆ.ಜಿ. ವಿಭಾಗದಲ್ಲಿ ತಜಿಕಿಸ್ತಾನದ ಅಬ್ದುಲ್ಲೊಯೆವಾ ಫರಿನೋಜ್ ಅವರನ್ನು, ಅಕಾನ್ಶಾ 70 ಕೆ.ಜಿ. ವಿಭಾಗದಲ್ಲಿ ರಷ್ಯಾದ ತೈಮಾಝೋವಾ ಎಲಿಜವೆಟಾ ಅವರನ್ನು 5–0 ಅಂತರದಿಂದ ಸೋಲಿಸಿದರು.

ಭಾರತದ ಇತರ ಮೂವರು ಮಹಿಳಾ ಬಾಕ್ಸರ್‌ಗಳು– ವಿನಿ (57 ಕೆ.ಜಿ), ಸೃಷ್ಟಿ (63 ಕೆ.ಜಿ) ಮತ್ತು ಮೇಘಾ (80 ಕೆ.ಜಿ) ಅವರು ಬೆಳ್ಳಿಯ ಪದಕಗಳನ್ನು ಕೊರಳಿಗೆ ಹಾಕಿಕೊಂಡರು.

ಪುರುಷರ ವಿಭಾಗದಲ್ಲಿ ಸಾಹಿಲ್ (75 ಕೆ.ಜಿ) ಮತ್ತು ಹೇಮಂತ್ (80+ ಕೆ.ಜಿ) ಅವರೂ ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡರು. ಫೈನಲ್‌ನಲ್ಲಿ ಇವರಿಬ್ಬರೂ 0–5 ಅಂತರದಲ್ಲಿ ಸೋತರು.

ಒಟ್ಟಾರೆ ಭಾರತದ 12 ಮಂದಿ ಬಾಕ್ಸರ್‌ಗಳು ಫೈನಲ್ ತಲುಪಿದ್ದರು. ಇದು ಈ ಆವೃತ್ತಿಯಲ್ಲಿ ಯಾವುದೇ ತಂಡಕ್ಕಿಂತ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.