ಬೆಂಗಳೂರು: ಮಧ್ಯಮ ದೂರ ಅಂತರದ ಓಟಗಾರ್ತಿ ಎಂ.ಆರ್.ಪೂವಮ್ಮ ಮತ್ತು ಹೈಜಂಪ್ ಪಟು ಚೇತನ್ ಬಿ ಅವರು ಇದೇ 25ರಿಂದ 29ರ ವರೆಗೆ ಪಟಿಯಾಲದಲ್ಲಿ ನಡೆಯಲಿರುವ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಮಹಿಳೆಯರ 400 ಮೀಟರ್ಸ್ ಮತ್ತು 800 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಪೂವಮ್ಮ ಪಾಲ್ಗೊಳ್ಳಲಿದ್ದಾರೆ. ಪುರುಷರ 800 ಮೀಟರ್ಸ್ ಓಟದಲ್ಲಿ ಕುಮಾರಸ್ವಾಮಿ ಬಿ.ಕೆ. ಸ್ಪರ್ಧಿಸಲಿದ್ದಾರೆ. ಚೇತನ್ ಬಿ ತಂಡವನ್ನು ಮುನ್ನಡೆಸುವರು ಎಂದು ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಎ.ರಾಜವೇಲು ತಿಳಿಸಿದ್ದಾರೆ.

ತಂಡಗಳು: ಪುರುಷರ ವಿಭಾಗ: ಚೇತನ್ ಬಿ (ಹೈಜಂಪ್), ಮನು ಡಿ.ಪಿ. (ಜಾವೆಲಿನ್), ಬೆಳ್ಳಿಯಪ್ಪ (10,000 ಮೀ), ಜೆಸ್ಸಿ ಸಂದೇಶ್ (ಹೈಜಂಪ್, ಟ್ರಿಪಲ್ ಜಂಪ್), ಲೋಕೇಶ್ ಎಸ್ (ಲಾಂಗ್ ಜಂಪ್); ಮಹಿಳೆಯರ ವಿಭಾಗ: ಎಂ.ಆರ್.ಪೂವಮ್ಮ (400, 800 ಮೀ), ಪ್ರಿಯಾ ಎಚ್.ಮೋಹನ್ (200, 400 ಮೀ), ದಾನೇಶ್ವರಿ ಎ.ಟಿ (100 ಮೀ), ನವಮಿ ಎಚ್.ಆರ್ (100 ಮೀ), ಜ್ಯೋತಿ ಕೆ (400 ಮೀ), ಕರೀಷ್ಮಾ ಸನಿಲ್ (ಜಾವೆಲಿನ್). ಅಧಿಕಾರಿಗಳು: ಲಕ್ಷ್ಮಣ, ರಾಜವೇಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.