ಬೆಂಗಳೂರು: ಯುಪಿ ಯೋಧಾ ತಂಡದ ಪರದೀಪ್ ನರ್ವಾಲ್ ಹಾಗೂ ಸುರೇಂದರ್ ಗಿಲ್ ಅವರ ಮಿಂಚಿನ ದಾಳಿಯ ಮುಂದೆ ಬೆಂಗಳೂರು ಬುಲ್ಸ್ ತಂಡವು ಮುಗ್ಗರಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಯೋಧಾಸ್ ತಂಡವು 44–37ರಿಂದ ಬೆಂಗಳೂರು ವಿರುದ್ಧ ಜಯಿಸಿತು. ನರ್ವಾಲ್ ಹಾಗೂ ಗಿಲ್ ತಲಾ 14 ಅಂಕ ಗಳಿಸಿದರು.

ವಾರಾಂತ್ಯದಂದು ತವರಿನ ತಂಡದ ಅಭಿಮಾನಿಗಳು ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದರು. ಆದರೆ, ಪಂದ್ಯದಲ ಮೊದಲಾರ್ಧದಲ್ಲಿಯೇ ಯುಪಿ ತಂಡವು (26–12) ದೊಡ್ಡ ಅಂತರದ ಮುನ್ನಡೆ ಸಾಧಿಸಿತು.

ಆದರೆ ವಿರಾಮದ ನಂತರ ಬೆಂಗಳೂರು ತಂಡವು ವಿರೋಚಿತವಾಗಿ ಆಡಿತು. ಇದರಿಂದಾಗಿ ಈ ಅವಧಿಯಲ್ಲಿ ಯುಪಿಗಿಂತ (18–25) ಬೆಂಗಳೂರು ಹೆಚ್ಚು ಅಂಕ ಗಳಿಸಿತು. ಇದರಿಂದಾಗಿ ಪಂದ್ಯವು ರೋಚಕತೆ ಮೂಡಿಸಿತ್ತು.

ಆದರೆ ಒಟ್ಟು ಫಲಿತಾಂಶದಲ್ಲಿ ಏಳು ಅಂಕಗಳ ಹಿನ್ನಡೆ ಅನುಭವಿಸಿತು. ಬೆಂಗಳೂರು ತಂಡದ ವಿಕಾಶ್ ಖಂಡೋಲಾ (12) ಹಾಗೂ ಭರತ್ (9) ರೇಡಿಂಗ್‌ನಲ್ಲಿ ಗಮನ ಸೆಳೆದರು.

ಪುಣೇರಿಗೆ ರೋಚಕ ಜಯ

ದಿನದ ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು 30–28ರಿಂದ ಯು ಮುಂಬಾ ಎದುರು ರೋಜಕ ಜಯಸಾಧಿಸಿತು.

ಪುಣೇರಿ ತಂಡದ ರೇಡರ್ ಅಸ್ಲಂ ಇನಾಂದಾರ್ (9), ಮೋಹಿತ್ ಗೋಯತ್ (5) ಗಮನ ಸೆಳೆದರು.

ಮುಂಬಾ ತಂಡದ ಗುಮಾನ್ ಸಿಂಗ್ (7) ಹಾಗೂ ಜೈ ಭಗವಾನ್ (5) ಉತ್ತಮವಾಗಿ ಆಡಿದರು.

ಪಂದ್ಯವು ಆರಂಭದಿಂದಲೇ ಕುತೂಹಲ ಕೆರಳಿಸಿತ್ತು. ವಿರಾಮದ ವೇಳೆಗೆಪುಣೇರಿ ತಂಡವು ಒಂದು ಅಂಕ (14–13) ಮುನ್ನಡೆಯಲ್ಲಿತ್ತು. ವಿರಾಮದ ನಂತರವೂ (16–15) ಕೇವಲ ಒಂದು ಅಂಕದ ಅಂತರದ ಮುನ್ನಡೆ ಗಳಿಸಿ ಗೆದ್ದಿತು. ಸೋಮವಾರ ವಿಶ್ರಾಂತಿಯ ದಿನವಾಗಿದೆ.

ಮಂಗಳವಾರದ ಪಂದ್ಯಗಳು

ತಮಿಳ್ ತಲೈವಾಸ್ –ಪಟ್ನಾ ಪೈರೆಟ್ಸ್ (ರಾತ್ರಿ 7.30)

ದಬಂಗ್ ಡೆಲ್ಲಿ–ಹರಿಯಾಣ ಸ್ಟೀಲರ್ಸ್ (ರಾತ್ರಿ 8.30)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.