ಬೆಂಗಳೂರು: ಭರತ್ ಮತ್ತು ನಾಯಕ ಪವನ್ ಶೆರಾವತ್ ಅವರ ಅಮೋಘ ‘ಸೂಪರ್ ಟೆನ್’ ಸಾಧನೆಯ ಬಲದಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ನಲ್ಲಿ ಭಾನುವಾರ ಭರ್ಜರಿ ಜಯ ಸಾಧಿಸಿತು.

ವೈಟ್ಫೀಲ್ಡ್ನ ಹೋಟೆಲ್ ಶೆರಟಾನ್ ಗ್ರ್ಯಾಂಡ್ನಲ್ಲಿ ನಡೆಯುತ್ತಿರುವ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಬುಲ್ಸ್ 45–37ರಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿತು. ಒಂದು ಬೋನಸ್ ಪಾಯಿಂಟ್ ಸೇರಿದಂತೆ ಭರತ್ 15 ಪಾಯಿಂಟ್ ಕಲೆ ಹಾಕಿದರೆ ಪವನ್ 10 ಟಚ್ ಪಾಯಿಂಟ್ಗಳ ಮೂಲಕ
ಮಿಂಚಿದರು.

ಜೈಪುರ ಪಿಂಕ್ ಪ್ಯಾಂಥರ್ಸ್ ಅರ್ಜುನ್ ದೇಶ್ವಾಲ್ ಒಬ್ಬರೇ ಮಿಂಚಿದರು. ಅವರು ನಾಲ್ಕು ಬೋನಸ್ ಪಾಯಿಂಟ್ ಸೇರಿದಂತೆ 16 ಪಾಯಿಂಟ್ ಕಲೆ ಹಾಕಿದರು. ದೀಪಕ್ ಹೂಡಾ ಆರು ಪಾಯಿಂಟ್ ಗಳಿಸಿದರು. ಈ ಜಯದೊಂದಿಗೆ ಬುಲ್ಸ್ ತಂಡದಲ್ಲಿ ಪ್ಲೇ ಆಫ್ ಹಂತದ ಕನಸು
ಚಿಗುರಿದೆ.

ಪಂದ್ಯದ ಆರಂಭದಲ್ಲಿ ಜೈಪುರ್ ಆಧಿಪತ್ಯ ಸ್ಥಾಪಿಸಿತ್ತು. ಡಿಫೆಂಡರ್ಗಳು ತಂಡಕ್ಕೆ ಪಾಯಿಂಟ್ಗಳನ್ನು ತಂದುಕೊಟ್ಟರು. ಮೊದಲ ರೇಡ್ನಲ್ಲೇ ಸಂದೀಪ್ ಧೂಳ್ ಅವರು ಪವನ್ ಅವರನ್ನು ಟ್ಯಾಕಲ್ ಮಾಡಿದರು. ಆದರೆ ನಂತರ ಪವನ್ ಸಹಜ ಆಟದ ಮೂಲಕ ಮಿಂಚಿದರು.

ಸ್ಟೀಲರ್ಸ್ಗೆ ಮುಂಬಾ ಎದುರು ಜಯ:
ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಹರಿಯಾಣ ಸ್ಟೀಲರ್ಸ್ 37–26ರಲ್ಲಿ ಮಣಿಸಿತು. ಹರಿಯಾಣ ಪರವಾಗಿ ವಿಕಾಸ್ ಖಂಡೋಲ 14 ಮತ್ತು ಆಶಿಶ್ 13 ಪಾಯಿಂಟ್ ಗಳಿಸಿದರು. ಯು ಮುಂಬಾಗಾಗಿ ಅಭಿಷೇಕ್ ಸಿಂಗ್ 10 ಮತ್ತು ಅಜಿತ್ 7 ಪಾಯಿಂಟ್ ತಂದುಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.